More

    ಹುತಾತ್ಮ ವೀರರ ಕನಸು ನನಸಾಗಿಲ್ಲ

    ಚಿತ್ರದುರ್ಗ: ಹುತಾತ್ಮ ವೀರರು ಕಂಡಿದ್ದ ಭಾರತದ ಸ್ವಾತಂತ್ರ್ಯದ ಕನಸು ಇನ್ನೂ ನನಸಾಗಿಲ್ಲ ಎಂದು ಕಾರ್ಮಿಕ ಮುಖಂಡ ಎಚ್.ರವಿಕುಮಾರ್ ಹೇಳಿದರು.
    ಎಐಡಿಎಸ್‌ಒ, ಎಐಡಿವೈಒ, ಎಐಯುಟಿಯುಸಿ ವತಿಯಿಂದ ನಗರದ ಭಗತ್‌ಸಿಂಗ್ ಪಾರ್ಕ್‌ನಲ್ಲಿ ಗುರುವಾರ ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖದೇವ್ ಅವರ 92ನೇ ವರ್ಷದ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.

    ದೇಶದ ಒಳಿತಿಗೆ ಹೋರಾಟ ನಡೆಸಿ, ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರು ಜಾತ್ಯತೀತ, ಸಮ ಸಮಾಜ ನಿರ್ಮಾಣ ಹಾಗೂ ಶೈಕ್ಷಣಿಕ, ಆರೋಗ್ಯ, ಉದ್ಯೋಗ ಸರ್ವರಿಗೂ ಉಚಿತವಾಗಿ ಲಭಿಸಬೇಕು ಎಂಬ ಕನಸು ಕಂಡಿದ್ದರು ಎಂದರು.

    ಆದರೆ, ಇಂದು ಶಿಕ್ಷಣ, ಆರೋಗ್ಯ ವ್ಯಾಪಾರೀಕರಣವಾಗಿದೆ. ರಾಜಕೀಯ ಅಧಿಕಾರಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಆಗುತ್ತಿದೆ. ಇನ್ನೂ ಆರ್ಥಿಕ ಅಸಮಾನತೆ ತೀವ್ರವಾಗಿದೆ ಎಂದು ಹೇಳಿದರು.

    ಮಹನೀಯರ ವಿಚಾರಧಾರೆಗಳ ಮೂಲಕ ಅವರ ಕನಸಗಳನ್ನು ನನಸು ಮಾಡುವ ದಿಕ್ಕಿನತ್ತ ನಾವು ಸಾಗಬೇಕಿದೆ. ಸಂದರ್ಭ ಬಂದರೆ ಒಗ್ಗೂಡಿ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು.

    ಮಾದಿಗ ಯುವಸೇನೆ ಜಿಲ್ಲಾಧ್ಯಕ್ಷ ಎಂ.ಆರ್.ಶಿವರಾಜ್, ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಮಚಂದ್ರರಾವ್, ಮುಖಂಡರಾದ ನಾಗರಾಜ್, ಕುಮುದಾ, ಅಭಿಷೇಕ್, ವಿನಯ್, ರಾಜೇಶ್ವರಿ, ರಾಮಲಿಂಗಪ್ಪ ಇತರರಿದ್ದರು.

    (ಸಿಟಿಡಿ 23 ಎಐಡಿಎಸ್‌ಒ)
    ಚಿತ್ರದುರ್ಗದಲ್ಲಿ ಗುರುವಾರ ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖದೇವ್ ಅವರ 92ನೇ ವರ್ಷದ ಹುತಾತ್ಮ ದಿನ ಆಚರಿಸಲಾಯಿತು. ಅಭಿಷೇಕ್, ಎಚ್.ರವಿಕುಮಾರ್, ನಾಗರಾಜ್, ರಾಮಚಂದ್ರರಾವ್, ಎಂ.ಆರ್.ಶಿವರಾಜ್, ವಿನಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts