More

    ಚುನಾವಣೆ ದಿನ ಡೇರಿಗೆ ಬೀಗ ಹಾಕಿ ಕಾರ್ಯದರ್ಶಿ ನಾಪತ್ತೆ !

    ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ತಾಳಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜ.31ರಂದು ಚುನಾವಣೆ ನಿಗದಿಯಾಗಿತ್ತು. ಬುಧವಾರ ನಾಮಪತ್ರ ಸಲ್ಲಿಸಲು ಗ್ರಾಮದ ಷೇರುದಾರ ಸದಸ್ಯರು ಹಾಗೂ ಚುನಾವಣಾಧಿಕಾರಿ ಆಗಮಿಸಿದ್ದು, ಸಂದ ಕಾರ್ಯದರ್ಶಿ ಸಹಕಾರ ಸಂದ ಬೀಗ ತೆಗೆಯದ ಕಾರಣ ಚುನಾವಣೆ ಸ್ಥಗಿತಗೊಳಿಸಲಾಗಿದೆ.

    ಸಹಕಾರ ಸಂಘದಲ್ಲಿ 45 ಸದಸ್ಯರು ಹಾಲು ಪೂರೈಸುತ್ತಿದ್ದು, ಪ್ರತಿಯೊಬ್ಬರಿಗೂ ಮತದಾನ ಮಾಡುವ ಅರ್ಹತೆಯಿದ್ದು, ಕಾರ್ಯದರ್ಶಿಯ ಅವ್ಯವಹಾರದಿಂದ ಕೇವಲ 25 ಸದಸ್ಯರನ್ನು ಮಾತ್ರ ಅರ್ಹ ಫಲಾನುಭವಿಗಳಾಗಿ ಗುರುತಿಸಿ ಚುನಾವಣೆ ನಡೆಸಲು ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಿದ್ದರು. ಚುನಾವಣೆ ಇನ್ನೆರಡು ದಿನ ಇರುವ ಹಾಗೆ ಕಾರ್ಯದರ್ಶಿ ಸಾರ್ವಜನಿಕರಿಗೆ ಚುನಾವಣೆ ಮಾಹಿತಿ ನೀಡಿದ್ದು, ಮತದಾರರ ಪಟ್ಟಿಯಲ್ಲಿ ಹಲವು ಅರ್ಹ ಷೇರುದಾರರನ್ನು ತೆಗೆದು ಹಾಕಿರುವುದಕ್ಕೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದರು. ಇದನ್ನು ಅರಿತ ಕಾರ್ಯದರ್ಶಿ ತಿಮ್ಮರಾಯಗೌಡ ಚುನಾವಣೆ ದಿನದಂದು ಗಲಾಟೆಯಾಗಬಹುದು ಎಂದು ಅರಿತು ನಾಪತ್ತೆಯಾಗಿದ್ದಾರೆ.
    ಡೇರಿ ಷೇರುದಾರ ಸದಸ್ಯರು ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದು, ಅರ್ಹ ಫಲಾನುಭವಿಗಳಿಗೆ ಮತದಾನದ ಹಕ್ಕು ನೀಡಬೇಕು, ಇಲ್ಲವಾದರೆ ಚುನಾವಣೆ ನಡೆಸಬಾರದು ಎಂದು ಗಲಾಟೆ ಮಾಡಿದರು. ಸ್ಥಳಕ್ಕೆ ಎಸ್​ಐ ಹಾಗೂ ಪೋಲಿಸ್​ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರನ್ನು ಸಮಾಧಾನಪಡಿಸಿ ಸಾರ್ವಜನಿಕರಲ್ಲಿ ಹಾಗೂ ಚುನಾವಣಾಧಿಕಾರಿ ಎನ್​.ಶಿವಲಿಂಗಪ್ಪ ಬಳಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಹಾಲು ಉತ್ಪಾದಕರ ಸಹಕಾರ ಸಂದಲ್ಲಿರುವ ಎಲ್ಲ ಸದಸ್ಯರ ಬಳಿ ಚರ್ಚಿಸಿ ಅರ್ಹ ಫಲಾನುಭವಿಗಳ ಮತದಾರ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಎನ್​.ಶಿವಲಿಂಗಪ್ಪ ತಿಳಿಸಿ, ಸಂದ ಅವರಣದಲ್ಲಿ 3 ಗಂಟೆಯವರೆಗೂ ಕಾದು ಕುಳಿತು ಹಿಂತಿರುಗಿದರು.

    ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇರುವಂತಹ 43 ಜನ ಅರ್ಹ ಮತದಾರರಲ್ಲಿ ಉದ್ದೇಶಪೂರ್ವಕವಾಗಿ ಹಿಂದಿನ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸೇರಿ ಕೇವಲ 25 ಜನರನ್ನು ಮಾತ್ರ ಆಯ್ಕೆ ಮಾಡಿ ಮತದಾರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಿದ್ದಾರೆ. ಡೇರಿಗೆ ಹಾಲು ಹಾಕದವರನ್ನು ಮತದಾರರ ಪಟ್ಟಿಗೆ ಸೇರಿಸಿ ಅಕ್ರಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಸರಿಯಾದ ಮತದಾರರ ಪಟ್ಟಿ ಬಂದ ನಂತರ ಚುನಾವಣೆ ನಡೆಸಬೇಕು, ಅಲ್ಲಿಯವರೆಗೂ ಚುನಾವಣೆ ನಡೆಸಬಾರದು.

    ಪ್ರಕಾಶ್​, ವಕೀಲರು, ತಾಳಕುಂಟೆ

    2019ರಲ್ಲಿ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಜ್ಯೋತಿ ಎಂಬುವರು ಅಧ್ಯೆಯಾಗಿ ಆಯ್ಕೆಯಾದ ನಂತರ ಅವರ ಬಾವ ಶ್ರೀನಿವಾಸ್​ ಎನ್ನುವರು ಇಲ್ಲಿ ಬಂದು ದರ್ಬಾರ್​ ನಡೆಸುತ್ತಿದ್ದಾರೆ. ಸಂದಲ್ಲಿ ಯಾವುದೇ ರೀತಿಯ ಷೇರು ಸದಸ್ಯತ್ವ ಪಡೆದಿಲ್ಲ. ಪ್ರತಿದಿನ ಬಂದು ಸಂದಲ್ಲಿ ಕುಳಿತು ನಡೆಯುವ ವ್ಯವಹಾರದಲ್ಲಿ ಬರುವಂತಹ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದುವರೆಗೂ ಸುಮಾರು 5.80 ಲಕ್ಷ ರೂ. ನಷ್ಟವಾಗಿದ್ದು, ಸಂಬಂಧಪಟ್ಟ ಮೇಲಿನ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು.

    ಟಿ.ಸಿ.ವೆಂಕಟಶಾಮಪ್ಪ, ಮಾಜಿ ಅಧ್ಯಕ್ಷ, ತಾಳಕುಂಟೆ ಡೇರಿ

    ನಾನು 10 ಗಂಟೆ ಸಮಯಕ್ಕೆ ಆಗಮಿಸಿದ್ದು ಇದುವರೆಗೂ ನಾಮಪತ್ರ ಸಲ್ಲಿಕೆಗೆ ಯಾರೂ ಬರದೆ ಇರುವ ಕಾರಣ 3ಗಂಟೆ 5 ನಿಮಿಷದವರೆಗೂ ಕಾದು ಹಿಂದಿರುಗುತ್ತಿದ್ದೇನೆ. ಕಾರ್ಯದರ್ಶಿ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಪೋನ್​ ತೆಗೆಯುತ್ತಿಲ್ಲ. ಸಂದ ಕಾರ್ಯದರ್ಶಿ ಇಲ್ಲದೆ ಹಾಗೂ ಕಚೇರಿಯ ಬೀಗ ತೆಗೆಯದೆ ಬೀದಿಯಲ್ಲಿ ನಿಂತು ಷೇರುದಾರ ಸದಸ್ಯರಿಂದ ನಾಮಪತ್ರ ಪಡೆಯಲು ಸಾದ್ಯವಿಲ್ಲ. ಚುನಾವಣೆ ಸಮಯದಲ್ಲಿ ಕಾರ್ಯದರ್ಶಿ ಜವಾಬ್ದಾರಿ ಹೆಚ್ಚಾಗಿರುತ್ತದೆ.

    ಎನ್​.ಶಿವಲಿಂಗಪ್ಪ, ಚುನಾವಣಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts