More

    ದೇಶವೇ ತಲೆತಗ್ಗಿಸುವ ವಿಚಾರ

    ರಿಪ್ಪನ್‌ಪೇಟೆ: ಜೈನ ಮಂದಿರದ ಮುನಿ ಆಚಾರ್ಯ ಶ್ರೀ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಹೊಂಬುಜದ ದಿಗಂಬರ ಜೈನ ಸಮಾಜದವರು, ಸಾರ್ವಜನಿಕರು, ಜಯಕರ್ನಾಟಕ ವೇದಿಕೆಯ ಕಾರ್ಯಕರ್ತರು ಹುಂಚ ನಾಡಕಚೇರಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ಹೊಂಬುಜ ಜೈನಮಠದ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಮ್ಮ ದೇಶ ಅನಾದಿ ಕಾಲದಿಂದಲೂ ಋಷಿಮುನಿಗಳ ಆಶೀರ್ವಾದದಿಂದ ಸಂಸ್ಕಾರಯುತವಾಗಿ ಬೆಳೆದಿದೆ. ಇಂತಹ ಸಂಸ್ಕಾರವAತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಧುಸಂತರ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ ಎಂದರು.
    ಯಾರಿಗೂ ಹಿಂಸೆ ಮಾಡಬಾರದು ಎನ್ನುವುದು ನಮ್ಮ ಭಾರತ ಧರ್ಮದ ತಿರುಳು. ಇದನ್ನು ಅರಿಯದ ಕೆಲವರಿಂದ ಸಾಮಾನ್ಯ ಜನರ ಕೊಲೆಯಾಗುತ್ತಿರುವುದು ಖಂಡನೀಯ. ಹೀರೇಕೋಡಿ ಗ್ರಾಮದಲ್ಲಿ ದಿಗಂಬರ ಆಚಾರ್ಯ ಮುನಿ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಇಂತಹ ಕೃತ್ಯದಿಂದ ಆರೋಪಿಗಳು ಈ ದೇಶದ ಕಾನೂನಿಗೆ ಭಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಧು ಸಂತರನ್ನೇ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆಂದರೆ ಜನಸಾಮಾನ್ಯರ ಪಾಡೇನು ಎಂಬ ಆತಂಕ ಸಮಾಜದಲ್ಲಿ ಮನೆಮಾಡಿದೆ ಎಂದು ಹೇಳಿದರು.
    ಸರ್ಕಾರಗಳು ಸಾಧು, ಸಂತ, ಗುರು, ದಾರ್ಶನಿಕರÀ ಮೇಲೆ ಹಲ್ಲೆ ಮತ್ತು ಹತ್ಯೆ ಪ್ರಕರಣಗಳಾಗದಂತೆ ವಿಶೇಷ ಕಾನೂನು ಜಾರಿಗೆ ತರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಹೊಂಬುಜ ಜೈನಮಠದಿಂದ ನಾಡಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮೋಹನ್ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts