More

    ಕಾಂಗ್ರೆಸ್ ಘೋಷಣಾ ಪತ್ರ ಜಿನ್ನಾ ಪೀಳಿಗೆಯದ್ದು

    ಚಿಕ್ಕಮಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ಘೋಷಣಾ ಪತ್ರ ಮಹಮ್ಮದ್ ಅಲಿ ಜಿನ್ನಾ ಪೀಳಿಗೆಯ ಸಹಕಾರ ಪಡೆದು ತಯಾರಿಸಿದಂತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಮದ್ ಆಲಿ ಜಿನ್ನಾ ದೇಶದ ಆಡಳಿತ ಮುಸ್ಲಿಮರ ಬಳಿ ಇರಬೇಕು ಎಂದುಕೊಂಡಿದ್ದರು. ಅದನ್ನು ಅವರು ಹಲವು ಬಾರಿ ಹೇಳಿದ್ದಾರೆ ಸಹ. ಕಾಂಗ್ರೆಸ್ ನ ಘೋಷಣಾ ಪತ್ರ ನೋಡಿದರೆ ಇವರು ಸಹ ಮುಸ್ಲಿಮರಿಗೆ ದೇಶದ ಅಧಿಕಾರ ನೀಡಲು ಹೊರಟಂತಿದೆ ಎಂದು ದೂರಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲುಗಳು ನಡೆಯುತ್ತಿವೆ. ಹಲ್ಲೆ ಕೊಲೆ ಸಾಮಾನ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ತಾಲಿಬಾಲ್ ನ ಸೆಮಿ ಮಾಡೆಲ್ ನಂತೆ ಕಾಣುತ್ತಿದೆ ಎಂದು ದೂರಿದರು.
    ಕಾಂಗ್ರೆಸ್ ಬಿಜೆಪಿ ವಿರುದ್ಧ ಚೊಂಬು ಜಾಹೀರಾತು ನೀಡಿದೆ. ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಜನ ಚೊಂಬು ಹಿಡಿದುಕೊಂಡು ಸಂಡಾಸಿಗೆ ಹೋಗಬೇಕಿತ್ತು. ಈಗ ಶೇ. 98 ರಷ್ಟು ಮನೆಯಲ್ಲಿ ಶೌಚಗೃಹಗಳಿವೆ. ಇದನ್ನು ಮೊದಲು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
    ಕಾಂಗ್ರೆಸ್ ತಾನು ನೀಡಿದ ಚೊಂಬಿನ ಜಾಹಿರಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆ. ಕೇಳುವ ಮೊದಲೇ ತಮಿಳುನಾಡಿಗೆ ನೀರು ಬಿಟ್ಟು ಕನ್ನಡಿಗರಿಗೆ ಚೊಂಬು ನೀಡಿದ್ದಾರೆ. ಕಿಶನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ ಹಣ ನೀಡದೆ ಚೊಂಬು ನೀಡಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆ ರದ್ದುಗೊಳಿಸುವ ಮೂಲಕ ಹುಟ್ಟುವ ಮಕ್ಕಳಿಗೂ ಚೊಂಬು ನೀಡಿದ್ದಾರೆ. 10 ತಿಂಗಳಿನಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ. ಹಾಲು ಉತ್ಪಾದಕರಿಗೆ ಸಹಾಯಧನ ನೀಡಿಲ್ಲ. ಪಹಣಿ ಜನ್ಮ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಸ್ಟಾಂಪ್ ಪೇಪರ್ ಬೆಲೆ ಎಲ್ಲವನ್ನು ಹೆಚ್ಚಿಸಿ ಜನರ ಕೈಗೆ ತುಂಬು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿ ಸಂವಿಧಾನವನ್ನು ನಮ್ಮ ಮೇಲೆ ಹೇರಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ನೋಡಿದರೆ ಕಾಂಗ್ರೆಸ್ ಸಂವಿಧಾನವನ್ನು ಸ್ವೀಕರಿಸಿದಂತೆ ಕಾಣುತ್ತಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
    ಪಿಎಫ್ ವ್ಯಾಪ್ತಿಗೆ ಏಳು ಕೋಟಿ ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ದೇಶದಲ್ಲಿ ಉದ್ಯೋಗ ಹೆಚ್ಚು ಹೆಚ್ಚು ಸೃಷ್ಟಿಯಾಗುತ್ತಿವೆ ಎಂಬುದಕ್ಕೆ ಉದಾಹರಣೆ. 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಕಳೆದ ವರ್ಷ ದೇಶದಲ್ಲಿ ಎರಡು ಕೋಟಿ ವಾಹನಗಳು ಮಾರಾಟವಾಗಿವೆ. ಇದನ್ನೆಲ್ಲಾ ಗಮನಿಸಿದಾಗ ದೇಶದ ಆರ್ಥಿಕ ಪ್ರಗತಿ ಉನ್ನತ ಮಟ್ಟಕ್ಕೆ ಹೋಗುತ್ತಿದೆ ಎಂಬುದು ಸಾಬೀತಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts