More

    ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಾಂಸತಿಕ ಪ್ರತಿಭಾ ಪ್ರದರ್ಶನಕ್ಕೆ ಧಾರವಾಡ ಉತ್ತಮ ಸ್ಥಳ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಅವರಲ್ಲಿ ಹುದುಗಿರುವ ಪ್ರತಿಭೆ ಗುರುತಿಸುವ ಕೆಲಸವೂ ಆಗಬೇಕು ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯೆ ಸವಿತಾ ಅಮರಶೆಟ್ಟಿ ಹೇಳಿದರು.
    ನಗರದ ಕಲಾಶಕ್ತಿ ಪ್ರತಿಷ್ಠಾನ ಹಾಗೂ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ಸುವರ್ಣ ಸಾಂಸತಿಕ ಸಮುಚ್ಚಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ “ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಕ್ಕಳಿಗೆ ವಿಶೇಷ ಹಕ್ಕುಗಳಿದ್ದು, ಅವುಗಳನ್ನು ಅರಿತು ಪಾಲಕರು ನಡೆಯಬೇಕು. ಮಕ್ಕಳಿಗೆ ರಕ್ಷಣೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದರಿಂದ ಮಾತ್ರ ಉತ್ಕ ೃಷ್ಟ ಮಾನವ ಸಂಪನ್ಮೂಲ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುವುದು ಸರಿಯಲ್ಲ. ಮಕ್ಕಳ ಅಭಿವೃದ್ಧಿಗೆ ಒತ್ತು ನೀಡಿ, ಒತ್ತಾಯ ಮಾಡಬೇಡಿ ಎಂದು ಸಲಹೆ ನೀಡಿದರು.
    ಅಧ್ಯಕ್ಷತೆಯನ್ನು ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಸಂ&ಸಂಸ್ಥೆಗಳು ಆಯೋಜಿಸುವ ಶಿಬಿರಗಳು ಶ್ಲಾಘನೀಯ ಕಾರ್ಯ. ಶಿಬಿರಗಳು ಸಮಾಜಕ್ಕೆ ಪೂರಕವಾಗಿ ಭವ್ಯ ಭವಿಷ್ಯ ಬರೆಯುವ ಮುನ್ನುಡಿಯಾಗಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಉತ್ತಮ ಮಾರ್ಗದತ್ತ ನಡೆಯುವಂತೆ ಸಲಹೆ ನೀಡಬೇಕು ಎಂದರು.
    ಶಕ್ತಿ ಹಿರೇಮಠ, ಎಂ.ಎಸ್​. ರಾಸ್​ ಮಾತನಾಡಿದರು. ಕಲಾಶಕ್ತಿ ಫೌಂಡೇಶನ್​ ಕಾರ್ಯದಶಿರ್ ಮಲ್ಲನಗೌಡ ಪಾಟೀಲ, ಅಮೃತಾ ಪಾಟೀಲ, ಪ್ರೇಮಾನಂದ ಶಿಂಧೆ, ಸಂದೀಪ ಯಾದಗಿರಿ, ವೆಂಕಟೇಶ ಮನ್ನಿಕೇರಿ, ಸುನೀಲ ಅರಳಿಕಟ್ಟಿ, ಕೃಷ್ಣ ಮೂತಿರ್ ಗೊಲ್ಲರ, ಇತರರು ಇದ್ದರು.
    ವಿನಾಯಕ ಕಲ್ಲೂರ ಸ್ವಾಗತಿಸಿದರು. ಪೂಜಾ ಪಾಟೀಲ ನಿರೂಪಿಸಿದರು. ಅನ್ನರ್ಪೂಣ ಪಾಟೀಲ ವಂದಿಸಿದರು. ನಂತರ ಶಿಬಿರದ ಮಕ್ಕಳು ವಿವಿಧ ನೃತ್ಯಗಳನ್ನು ಪ್ರದಶಿರ್ಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts