More

    ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮುಖಭಂಗ; ಪ್ರಮುಖ ಕ್ಷೇತ್ರಗಳನ್ನೇ ಕಳೆದುಕೊಂಡ ಪಕ್ಷ

    ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ಸ್ಥಾಪಿಸಲು ವಿಫಲವಾದ ಬಿಜೆಪಿಗೆ ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಹಿನ್ನೆಡೆಯುಂಟಾಗಿದೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ ಕೇವಲ ಒಂದು ಸ್ಥಾನವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

    ಇದನ್ನೂ ಓದಿ: VIDEO: ಅಂಗಳದಲ್ಲಿ ಬಂದ ಕೋಳಿಗಾಗಿ ಮಾರಾಮಾರಿ… ಬಡಿಗೆ ಹಿಡಿದು ಕಿತ್ತಾಡಿದ ಉಡುಪಿ ಮಂದಿ!

    ಆಡಳಿತದಲ್ಲಿರುವ ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿ ನಾಲ್ಕು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದ ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಅತ್ಯಂತ ಗಟ್ಟಿ ನೆಲೆ ಎಂದೆನಿಸಿಕೊಂಡಿರುವ ನಾಗ್ಪುರದಲ್ಲಿ ಬಿಜೆಪಿ ಸೋಲುಂಡಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತಂದೆ ಗಂಗಾಧರ್ ರಾವ್ ಫಡ್ನವೀಸ್ ಪ್ರತಿನಿಧಿಸಿದ್ದರು. 1989 ರಲ್ಲಿ ಮೊದಲ ಬಾರಿಗೆ ಕ್ಷೇತ್ರವನ್ನು ಗೆದ್ದ ಗಡ್ಕರಿ ಅವರು ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ: ದೇವಸ್ಥಾನದ ಜಾಗ ಅತಿಕ್ರಮಣ ಮಾಡ್ಬೇಡ್ರಿ ಎಂದಿದ್ದಕ್ಕೆ ಯುವಕ ಆಸ್ಪತ್ರೆ ಸೇರಬೇಕಾಯ್ತು!

    ಫಡ್ನವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಬಿಜೆಪಿ ನಾಯಕರು ಪುಣೆಯಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಆದರೆ ಆ ಕ್ಷೇತ್ರವೂ ಆಡಳಿತ ಪಕ್ಷದ ಪಾಲಾಗಿದೆ. ನಾವು ಆಡಳಿತ ಪಕ್ಷವನ್ನು ತಪ್ಪಾಗಿ ಅರಿತಿದ್ದೆವು. ಚುನಾವಣಾ ಫಲಿತಾಂಶ ನಾವಂದುಕೊಂಡಂತೆ ಬಂದಿಲ್ಲ ಎಂದು ಬಿಜೆಪಿ ನಾಯಕ ಫಡ್ನವೀಸ್​ ಹೇಳಿದ್ದಾರೆ. (ಏಜೆನ್ಸೀಸ್​)

    3 ಕೋಟಿ ಖರ್ಚು ಮಾಡಿಸಿ ಮದ್ವೆಯಾದವ ಮೊದಲ ರಾತ್ರಿಯೇ ಫುಲ್ ಟೈಟ್! ಮುಂದೆ ಆಗಿದ್ದೆಲ್ಲವೂ…

    ರಕ್ತದ ಮಡುವಿನಲ್ಲಿ ಬಿದ್ದು ಅಂಗಲಾಚುತ್ತಿದ್ದ ಹುಚ್ಚೆ ಮಂಜನ ಪ್ರಾಣ ಜನರ ಕಣ್ಣೆದುರೇ ಹೋಯ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts