More

    ಇಂದು ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಎಸಿಬಿ ಶಾಕ್​, ರಾಜ್ಯದ 12 ಕಡೆ ದಾಳಿ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್​ ನೀಡಿದ್ದಾರೆ.

    ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ ಕಲಬುರಗಿ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಒಟ್ಟು 12 ಕಡೆ ಎಸಿಬಿ ಏಕ ಕಾಲಕ್ಕೆ ದಾಳಿ ನಡೆಸಿದ್ದು, ತನಿಖೆ ಮುಂದುವರಿಸಿದೆ.

    ಇದನ್ನೂ ಓದಿರಿ ಕರ್ನಾಟಕದಲ್ಲಿ ಕರೊನಾಗೆ ಮೊದಲ ಪೊಲೀಸ್ ಬಲಿ!

    ಬೆಳಗಾವಿಯಲ್ಲಿ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಸುಭಾಷ ಸುರೇಂದ್ರ ಉಪ್ಪಾರ ಅವರ ಮೇಲೂ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ರುಕ್ಮಿಣಿನಗರದ ಮನೆ, ಬೆಳಗಾವಿಯಲ್ಲಿನ ಕಚೇರಿ, ಹುಟ್ಟೂರು ಬಸವನ ಕುಡಚಿ ಗ್ರಾಮದಲ್ಲಿರುವ ಸಹೋದರನ ವಾಸದ ಮನೆ ಹಾಗೂ ಅಳಿಯನ ಮನೆ ಸೇರಿ ಒಟ್ಟು ನಾಲ್ಕು ಕಡೆ ಏಕ ಕಾಲದಲ್ಲಿ ಎಸಿಬಿ ಎಸ್‌ಪಿ ಡಿ.ಎಸ್. ನೇಮಗೌಡ ನೇತೃತ್ವದ ತಂಡ ದಾಳಿ ನಡೆಸಿದೆ.

    ದಾಳಿ ವೇಳೆ ಚಿನ್ನಾಭರಣ, ನಗದು ಸೇರಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ನೇಮಗೌಡ ತಿಳಿಸಿದ್ದಾರೆ.

    ಇದನ್ನೂ ಓದಿರಿ ಇವರಿಗೆ ಕಾಗೆಯಿಂದಲೇ ಅದೃಷ್ಟ! ಮನೆಯಲ್ಲೇ ಬಿಳಿಕಾಗೆ ಸಾಕ್ತಿದ್ದಾರೆ

    ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿಯ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಅವರ ಮನೆ-ಕಚೇರಿ ಮೇಲೂ ಎಸಿಬಿ ದಾಳಿ ಆಗಿದೆ. ಕಲಬುರಗಿಯ ಪೂಜಾ ಕಾಲನಿಯಲ್ಲಿರುವ ಮನೆ, ಸಿಟಿ ಸ್ಕ್ವೇರ್​ ಸಂಕೀರ್ಣದಲ್ಲಿರುವ ಅಂಗಡಿ ಮಳಿಗೆ ಹಾಗೂ ಇವರು ಕೆಲಸ ಮಾಡುತ್ತಿರುವ ಕಚೇರಿ, ಬೀದರ್​ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಕಲಬುರಗಿ ಮತ್ತು ಯಾದಗಿರಿ ಡಿವೈಎಸ್ಪಿಗಳ ನೇತೃತ್ವದ ತಂಡ ದಾಖಲೆ ಪರಿಶೀಲನೆ ನಡೆಸುತ್ತಿದೆ.

    ಬಾಗಲಕೋಟೆಯ ಭೂ ದಾಖಲೆಗಳ ಉಪ ನಿರ್ದೇಶಕ ಗೋಪಾಲ್​ ಎಸ್​. ಮಾಲಗತ್ತಿ ಅವರ ಮೇಲೂ ಎಸಿಬಿ ಕಣ್ಣು ಬಿದ್ದಿದೆ. ಕೊಪ್ಪಳ ಜಿಲ್ಲೆಯ ಜೆ.ಎಚ್​. ಪಟೇಲ್​ ನಗರದಲ್ಲಿನ ಮನೆ, ಸದ್ಯ ವಾಸದಲ್ಲಿರುವ ಬಾಗಲಕೋಟೆಯ ಸರ್ಕಾರಿ ವಸತಿ ಗೃಹ, ಕೆಲಸ ನಿರ್ವಹಿಸುತ್ತಿರುವ ಕಚೇರಿ, ಇವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯಪುರ ಭೂ ದಾಖಲೆಗಳ ನಿರ್ದೇಶಕರ ಕಚೇರಿ ಮೇಲೂ ಎಸಿಬಿ ದಾಳಿ ಮಾಡಿದೆ.

    ಇದನ್ನೂ ಓದಿರಿ ಶಂಕರಮಠದಲ್ಲಿ ಧನ್ವಂತರಿ ಮಹಾಯಜ್ಞ, ಸಿಎಂ ಬಿಎಸ್​ವೈ ಸಂಕಲ್ಪ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts