More

    ಪಿವಿ ಸಿಂಧು, ಕೆ. ಶ್ರೀಕಾಂತ್ ಶುಭಾರಂಭ, ಸೈನಾ ನೆಹ್ವಾಲ್ ಶಾಕ್

    ಬ್ಯಾಂಕಾಕ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಕೆ.ಶ್ರೀಕಾಂತ್ ಟೊಯೊಟಾ ಥಾಯ್ಲೆಂಡ್ ಓಪನ್ ಸೂಪರ್ 1000 ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದಾರೆ. ಸಮೀರ್ ವರ್ಮ ವಿಶ್ವ ನಂ.10 ಲೀ ಜೀ ಅವರನ್ನು ಮಣಿಸಿ ಅಚ್ಚರಿ ಲಿತಾಂಶ ನೀಡಿದರೆ, ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಶಾಕ್ ಅನುಭವಿಸಿದ್ದಾರೆ. ಕಳೆದ ವಾರ ನಡೆದ ಏಷ್ಯಾ ಚರಣದ ಮೊದಲ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಶಾಕ್ ಅನುಭವಿಸಿದ್ದ ಪಿವಿ ಸಿಂಧು 21-17, 21-13 ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ವಿಶ್ವ ನಂ.12 ಬುಸಾನನ್ ಎದುರು 43 ನಿಮಿಷಗಳ ಹೋರಾಟದಲ್ಲಿ ಜಯ ದಾಖಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ 21-11, 21-11 ರಿಂದ ಥಾಯ್ಲೆಂಡ್‌ನ ಸುತೋಹಿಕೊಮ್ ಥಾಮಾಸಿನ್ ಅವರನ್ನು ಸೋಲಿಸಿದರು. ಭಾರತದ ಮತ್ತೋರ್ವ ಆಟಗಾರ, ವಿಶ್ವ ನಂ.31 ಸಮೀರ್ ವರ್ಮ 18-21, 27-25, 21-19 ರಿಂದ 8ನೇ ಶ್ರೇಯಾಂಕಿತ ಆಟಗಾರ ಲೀ ಜೀ ಅವರನ್ನು ರೋಚಕ ಹಣಾಹಣಿಯಲ್ಲಿ ಮಣಿಸಿದರು.

    ಇದನ್ನೂ ಓದಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ವಶ: ಇತಿಹಾಸ ಬರೆದ ಟೀಮ್ ಇಂಡಿಯಾ ಯುವ ಪಡೆ

    * ಅಶ್ವಿನಿ-ಸಿಕ್ಕಿ ಜೋಡಿಗೆ ಜಯ
    ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ಸಾಯಿರಾಜ್ ಜೋಡಿ 23-21, 21-18 ನೇರ ಗೇಮ್‌ಗಳಿಂದ ಡೆನ್ಮಾರ್ಕ್ ನಿಕ್ಲಾಸ್ ನೊಹರ್ -ಅಮೆಲೈ ಮಗೆಲುಂಡ್ ಎದುರು ಸುಲಭ ಜಯ ದಾಖಲಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ 22-20, 28-26 ರಿಂದ ಭಾರತದವರೇ ಆದ ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿಯನ್ನು ಸೋಲಿಸಿತು.

    ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

    * ಸೈನಾಗೆ ನಿರಾಸೆ
    ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 17-21, 6-21 ನೇರ ಗೇಮ್‌ಗಳಿಂದ ಮಾಜಿ ವಿಶ್ವ ಚಾಂಪಿಯನ್ ಹಾಗೂ ಸ್ಥಳೀಯ ಆಟಗಾರ್ತಿ ರಚಾನೊಕ್ ಇಂಥೋನನ್ ಎದುರು ನಿರಾಸೆ ಅನುಭವಿಸಿದರು. ಸಮೀರ್ ವರ್ಮ ಸಹೋದರ ಸೌರಭ್ ವರ್ಮ 16-21, 11-21 ರಿಂದ ಇಂಡೋನೇಷ್ಯಾದ 5ನೇ ಶ್ರೇಯಾಂಕಿತ ಆಟಗಾರ ಅಂಥೋನಿ ಗಿನ್ಟಿಂಗ್ ಎದುರು ಸೋಲು ಕಂಡರೆ, ಅನುಭವಿ ಆಟಗಾರ ಪಿ.ಕಶ್ಯಪ್ ಮೊದಲ ಗೇಮ್‌ನಲ್ಲಿ 0-3 ರಿಂದ ಹಿನ್ನಡೆಯಲ್ಲಿದ್ದ ವೇಳೆ ಗಾಯದ ಸಮಸ್ಯೆಯಿಂದ ಕಣದಿಂದ ಹಿಂದೆ ಸರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts