More

    ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ

    ಸೋಮವಾರಪೇಟೆ: ಟೀಮ್ ಎಬಿಡಿ ವತಿಯಿಂದ ಸೀಸನ್ 3ರ ಐಪಿಎಲ್ ಮಾದರಿಯಲ್ಲಿ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.24 ಮತ್ತು 25ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎಲ್.ಅರ್ಜುನ್ ಹೇಳಿದರು.

    ಬೆಳಗ್ಗೆ 10ಕ್ಕೆ ಟೂರ್ನಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಲಿದ್ದಾರೆ. ಪ್ರಥಮ 50 ಸಾವಿರ ರೂ. ನಗದು, ದ್ವಿತೀಯು ಸ್ಥಾನಕ್ಕೆ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಟೂರ್ನಿಯಲ್ಲಿ ಉತ್ತಮ ಆಟಗಾರ, ಬೌಲರ್, ಫೀಲ್ಡರ್, ಉತ್ತಮ ದಾಂಡಿಗ ಪ್ರಶಸ್ತಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಟೂರ್ನಿಯಲ್ಲಿ ಒಟ್ಟು 13 ಜನರನ್ನೊಳಗೊಂಡ 8 ತಂಡಗಳು ಭಾಗವಹಿಸಲಿದ್ದು, ಬಿಡ್ ಮೂಲಕ ತಂಡವನ್ನು ಪ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ. ಲೀಗ್ ಮಾದರಿಯಲ್ಲಿ 6 ಓವರ್‌ಗಳ ಪಂದ್ಯಾಟ ನಡೆಯಲಿದ್ದು, ಶಿಸ್ತುಬದ್ಧ ಆಟಗಾರನಿಗೆ ಪ್ರಶಸ್ತಿ ನೀಡಲಾಗುವುದು. ಎಲ್ಲ ತಂಡದ ಆಟಗಾರರು ಸಮವಸ್ತ್ರ ಧರಿಸಿ ಆಡಬೇಕಿದ್ದು, ಇದನ್ನು ತಂಡದ ಮಾಲೀಕರು ಮಾಡಿಕೊಡಬೇಕಿದೆ ಎಂದು ತಿಳಿಸಿದರು.

    ಮಾರುತಿ 800 ಕಾರುಗಳು ಹಾಗೂ ಆರ್‌ಎಕ್ಸ್ 100 ಸಿಸಿ ಯಮಹ ಬೈಕ್‌ಗಳ ಉತ್ತಮ ನಿರ್ವಹಣೆಗೆ ಬಹುಮಾನ ನೀಡಲಾಗುವುದು. ಮಾರುತಿ 800 ಕಾರುಗಳ ರಿವರ್ಸ್ ಸ್ಕಿಲ್ ಡ್ರೈವಿಂಗ್ ಸ್ಪರ್ಧೆಯಿದ್ದು ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಫೆ.24 ರಂದು ಈ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

    ಸ್ಥಳೀಯ ಆಟಗಾರರಿಗೆ ಮಾತ್ರ ಅವಕಾಶವಿದ್ದು, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 90190 94941 ಅಥವಾ 7760802590 ಸಂಪರ್ಕಿಸಲು ಮನವಿ ಮಾಡಿದ್ದಾರೆ.

    ಸಂಘದ ಉಪಾಧ್ಯಕ್ಷ ಎಚ್.ಆರ್.ಪೃಥ್ವಿ, ಕಾರ್ಯದರ್ಶಿ ಡಿ.ಪಿ.ಗಗನ್, ಗೌರವ ಅಧ್ಯಕ್ಷ ಚೇತನ್, ಸದಸ್ಯರಾದ ಎಸ್.ಎ.ಸಂದೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts