More

    ಬಸವನಹಳ್ಳಿ ಶ್ರೀ ವೀರಭದ್ರೇಶ್ವಸ್ವಾಮಿ ಕೆಂಡೋತ್ಸವ ಸಂಪನ್ನ

    ಚಿಕ್ಕಮಗಳೂರು: ಬಸವನಹಳ್ಳಿ ಕುಂಬಾರ ಬೀದಿಯ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಪೂಜೆ ಸಲ್ಲಿಸಿ ಕೆಂಡಹಾಯ್ದು ಶ್ರದ್ಧಾಭಕ್ತಿ ಮೆರೆದರು.

    ರಾತ್ರಿ ನಂದಿ ಉತ್ಸವದ ನಂತರ ಕೆಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಮಂಗಳವಾರ ಬೆಳಗ್ಗೆ ದೇವರ ಉತ್ಸವ, ಗ್ರಾಮ ಪ್ರದಕ್ಷಿಣೆಯಲ್ಲಿ ವೀರಗಾಸೆ ಕಲಾತಂಡದ ಜತೆ ಕಳಶಹೊತ್ತ ಬಾಲಕಿಯನ್ನು ಸ್ವಾಗತಿಸಲಾಯಿತು. ಅರ್ಚಕರು ಕೆಂಡಕ್ಕೆ ಪೂಜೆ ಸಲ್ಲಿಸದ ನಂತರ ಗಂಗೆ ಪ್ರವೇಶ, ಉತ್ಸವಮೂರ್ತಿಗಳು ಸಾಗಿದವು. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ತಮ್ಮ ಮಕ್ಕಳನ್ನು ಹೆಗಲಮೇಲೆ ಹೊತ್ತು, ದಂಪತಿಗಳು ಒಟ್ಟಿಗೆ ಕೆಂಡ ಹಾಯ್ದರು.

    ವೀರಭದ್ರ, ಜಗದ್ಗುರು ರೇಣುಕಾಚಾರ್ಯರು, ಕುಂಬಳೇಶ್ವರನಿಗೆ ಮಹಾ ರುದ್ರಾಭಿಷೇಕ, ನವಗ್ರಹ ಪೂಜೆ ನಂತರ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ನಗರ ಸುತ್ತಮುತ್ತಲ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಭದ್ರಕಾಳಮ್ಮ, ವೀರಭದ್ರೇಶ್ವರ ಉತ್ಸವ ಮೂರ್ತಿ ಕುಂಬಾರ ಬೀದಿ, ನೇಕಾರ ಬೀದಿ, ಗೋಪಾಕೃಷ್ಣಸ್ವಾಮಿ ದೇವಾಲಯ ರಸ್ತೆಯಲ್ಲಿ ಸಾಗಿತು.

    ದೇವಾಲಯದ ಕಾರ್ಯದರ್ಶಿ ಸಿ.ಎಸ್.ಏಕಾಂತರಾಮು ಮಾತನಾಡಿ, 80 ಮನೆಯ ಗ್ರಾಮದಲ್ಲಿ ಪ್ರತಿ ವರ್ಷ ಕಾರ್ತಿಕಮಾಸದಲ್ಲಿ ಕೆಂಡೋತ್ಸವ ನಡೆಸಲಾಗುತ್ತದೆ. ದೀಪಾವಳಿ ನಂತರ ಒಂದು ತಿಂಗಳು ಒಬ್ಬೊಬ್ಬರು ಸೇವಾಕರ್ತರಿಂದ ವಿಶೇಷ ಪೂಜೆ ನಡೆಸಲಾಗುತ್ತದೆ. ಡಿ.14ರಂದು ಕಡೇ ಕಾರ್ತಿಕ ದೀಪೋತ್ಸವ ನಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts