More

    ದೇವಸ್ಥಾನ ಜೀರ್ಣೋದ್ಧಾರ ತಡೆಗೆ ಖಂಡನೆ

    ಬೆಳಗಾವಿ: ಟಿಳಕವಾಡಿ ಗುರುವಾರ ಪೇಟೆಯಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಜೀರ್ಣೋದ್ಧಾರಕ್ಕೆ ತಡೆ ನೀಡಿ ಮಹಾನಗರ ಪಾಲಿಕೆ ನೋಟಿಸ್ ನೀಡಿರುವುದನ್ನು ಖಂಡಿಸಿ ಅಹಿರ ಗವಳಿ ಸಮುದಾಯದ ಮುಖಂಡರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ದೇವಸ್ಥಾನ ಜೀರ್ಣೋದ್ಧಾರಕ್ಕೆ ತಡೆ ನೀಡಿದ್ದು ಸರಿಯಲ್ಲ. ಕೂಡಲೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕು. 10 ಗುಂಟೆ ಜಾಗದಲ್ಲಿ ಗವಳಿ ಸಮುದಾಯ 175 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ, ತುಳಸಿ ವಿವಾಹ ಮತ್ತು ಇನ್ನಿತರ ಕಾರ್ಯಕ್ರಮ ಆಚರಿಸುತ್ತ ಬಂದಿದೆ. ಗವಳಿ ಸಮುದಾಯದ ಆರಾಧ್ಯ ದೈವ ಶ್ರೀ ಕೃಷ್ಣನ ಮಂದಿರವನ್ನು ಅಲ್ಲಿ ನಿರ್ಮಿಸಿದ್ದೇವೆ. ಆದರೆ, ಪ್ರವಾಹದಿಂದ ದೇವಸ್ಥಾನ ಕಟ್ಟಡ ಶಿಥಿಲಗೊಂಡಿದೆ. ಇದೀಗ ಸಮುದಾಯದ ಜನರು ದುರಸ್ತಿ ಮಾಡಲು ಮುಂದಾಗಿದ್ದಾರೆ. ಆದರೆ, ಜಾಗ ಪಾಲಿಕೆಯದಾಗಿದ್ದು, ಅಲ್ಲಿ ಯಾವುದೇ ದೇವಸ್ಥಾನ ಹಾಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದು ಎಂದು ಪಾಲಿಕೆ ನೋಟಿಸ್ ನೀಡುವ ಮೂಲಕ ದೇವಸ್ಥಾನ ಜೀರ್ಣೋದ್ಧಾರ ತಡೆಯಲು ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ನೋಟಿಸ್ ನೀಡುವ ಪ್ರಕ್ರಿಯೆ ಕೈಬಿಡಬೇಕು. ಜೀರ್ಣೋದ್ಧಾರಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

    ರವಿಕುಮಾರ ಕಾಕಿತಕರ್, ಪಂಡಿತ ಗವಳಿ, ರಾಜು ಗವಳಿ, ಪೀರಾಜಿ ಚೌದರಿ, ಧನರಾಜ ಗವಳಿ, ಗಜಾನನ ಗವಳಿ, ಬಾಬು ಗವಳಿ, ಕಮಲು ಗವಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts