More

    ಪ್ರತಿ ಮನೆಗೂ ಸರ್ಕಾರಗಳ ಸಾಧನೆ ತಿಳಿಸಿ

    ದೇವರಹಿಪ್ಪರಗಿ:  ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೂ ಮುಟ್ಟಿಸುವ ಕೆಲಸ ಮಾಡಬೇಕೆಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

    ಪಟ್ಟಣ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಒಬಿಸಿ ಮೋರ್ಚಾದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಮತಕ್ಷೇತ್ರದಲ್ಲಿ ಹಲವಾರು ಅಭಿವೃವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ, ವಿರೋಧ ಪಕ್ಷದವರ ಸುಳ್ಳು ಹೇಳಿ ಮತದಾರರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಅಂತ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳಬಾರದು ಎಂದರು.

    ಕಾಲುವೆ ಮೂಲಕ ಕ್ಷೇತ್ರದಲ್ಲಿನ 30ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇನೆ. ಉದಾಳ-ಪೀರಾಪುರ್ ಯೋಜನೆ ಸೇರಿ ಬಹುತೇಕ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ರೂ. ಅನುದಾನ ತಂದು ಕೆಲಸ ಮಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಕೊಡುತ್ತೇವೆ ಎಂದರು.

    ಮತಕ್ಷೇತ್ರದಲ್ಲಿ ಮುಖ್ಯ ರಸ್ತೆಗಳು ಸೇರಿ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವಂತಹ ಬಹುತೇಕ ಎಲ್ಲ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗಿದೆ. ರೈತರ ಹೊಲಗದ್ದೆಗಳಿಗೆ ಹೋಗುವ ರಸ್ತೆಗಳ ಡಾಂಬರೀಕರಣ, ಸಿಸಿ ರಸ್ತೆ ನಿರ್ಮಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಎಂದೂ ಜಾತಿ ಭೇದ ಮಾಡಿಲ್ಲ ಎಂದರಲ್ಲದೆ, ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೋಚಬಾಳ ಮಾತನಾಡಿ, ಮಾ. 6 ರಂದು ಸಂಜೆ 4 ಗಂಟೆಗೆ ಮತಕ್ಷೇತ್ರದ ಜಾಲವಾದ ಗ್ರಾಮದಲ್ಲಿ ಜಿಲ್ಲಾಮಟ್ಟದ ಒಬಿಸಿ ಮೋರ್ಚಾದ ಬೃಹತ್ ಸಮಾವೇಶ ನಡೆಯಲಿದೆ. ಜಿಲ್ಲೆಯ ಎಂಟು ಕ್ಷೇತ್ರದ ಒಬಿಸಿ ಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಸೇರಿ ಬಿಜೆಪಿಯ ಅಂದಾಜು 15 ಸಾವಿರ ಕಾರ್ಯಕರ್ತರು ಸೇರಲಿದ್ದಾರೆ. ರಾಜ್ಯ ನಾಯಕರು ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಪ್ರತಿ ಮತಕ್ಷೇತ್ರದಲ್ಲಿ ಪ್ರತಿಯೊಂದು ಮೋರ್ಚಾದ ಸಮಾವೇಶ ಮಾಡಲಾಗುವುದು ಎಂದರು.

    ದೇವರಹಿಪ್ಪರಗಿ ಮತಕ್ಷೇತ್ರದ ಚುನಾವಣೆ ಪ್ರಭಾರಿ ಅನಿಲ ಜಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟೆ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಾಬು ಮಾಶಾಳ, ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ (ಅಸ್ಕಿ) ಸಿದ್ದು ಬುಳ್ಳಾ, ರಮೇಶ ಮಸಬಿನಾಳ, ಪ್ರಮೋದ ಬಡಿಗೇರ, ಗಾಯತ್ರಿ ದೇವೂರ, ಗುರುನಾಥ ಮುರಡಿ, ಭೀಮನಗೌಡ ಲಚ್ಚನ, ಶಂಕರಗೌಡ ಬಿರಾದಾರ, ಸುಜಾತ ಮಳ್ಳಳ್ಳಿ, ವಿದ್ಯಾಧರ ಸಂಗೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts