More

    ತಹಸೀಲ್ದಾರ್ ಹತ್ಯೆಗೆ ನೌಕರರ ಸಂಘ ಆಕ್ರೋಶ

    ಚಿಕ್ಕೋಡಿ: ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ತಾಲೂಕಾ ಘಟಕದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಎಸ್.ಎಸ್. ಸಂಪಗಾಂವಿ ಅವರಿಗೆ ಮನವಿ ಸಲ್ಲಿಸಿದರು.

    ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಅದರಲ್ಲಿಯೂ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಸೇರಿ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮೇಲೆ ಇಂತಹ ಹಲ್ಲೆ ಮತ್ತು ದೌರ್ಜನ್ಯ ನಡೆಯುತ್ತಿವೆ. ಆದ್ದರಿಂದ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎ. ಮೆಳವಂಕಿ, ಎಸ್.ಎನ್. ಬೆಳಗಾವಿ, ಸಿ.ಎ. ಪಾಟೀಲ, ದತ್ತಾ ಎನ್. ಕಾಂಬಳೆ, ಎ.ಸಿ. ಮುಲ್ಲಾ, ಎಸ್.ಎ. ಖಡ್ಡ, ಜಿ.ಎಂ. ಕಾಂಬಳೆ, ಮಂಜುನಾಥ ಜನಮಟ್ಟಿ, ಎಂ.ಎ. ಬಿರಾದಾರ, ಪ್ರಮೋದ ಮಾನೆ, ಅರುಣ ಸಂಗ್ರೋಳಿ, ಎ.ಬಿ. ಸೊಲ್ಲಾಪುರೆ, ಶಿವಾನಂದ ಶಿರಗಾಂವೆ, ಬಿ.ಎ. ಕುಂಬಾರ, ಬಿ.ಎಸ್. ಹಂಜಿ, ಪ್ರದೀಪ ಬೋವಿ, ಸಿ.ಎ. ವಂಟಗೂಡೆ, ಎ.ಪಿ. ಗೋಟೂರೆ, ಸಂಜು ಕುಂದರಗಿ, ಎಫ್.ಕೆ. ಸುಂದರವಾಲೆ, ಸಂಜು ಅರಕೇರಿ, ಜಿ.ಜಿ. ಹವಾಲ್ದಾರ, ಕೆ.ಕೆ. ವಾಡಪ್ಪಗೋಳ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts