ತಿಂಡಿ-ಊಟ ಮಾಡ್ತೇವೋ ಇಲ್ಲವೋ! ಆದ್ರೆ, ಕೈಯಲ್ಲಿ ಆರು ಇಂಚಿನ ಸ್ಮಾರ್ಟ್‌ಫೋನ್ ಸದಾ ಇರಲೇಬೇಕು ಎಂಬ ಮನಸ್ಥಿತಿ ಜನರಲ್ಲಿ ಮೂಡಿಬಿಟ್ಟಿದೆ. ಬೆಳಗ್ಗೆ ಎಚ್ಚರಗೊಂಡ ಕ್ಷಣದಿಂದ ರಾತ್ರಿ ನಿದ್ರೆಗೆ ಜಾರುವವರೆಗೂ ಈ ಫೋನ್ ಬೇಕೇ ಬೇಕು. ಆ ಮಟ್ಟಿಗಿನ ಅಡಿಕ್ಷನ್ ಜನರಲ್ಲಿ ಹೆಚ್ಚಿದೆ. ತಮ್ಮ ದಿನಚರಿಯ ಬಹುಪಾಲು ಸಮಯವನ್ನು ಸ್ಮಾರ್ಟ್ಫೋನ್ನೊಂದಿಗೆ ಕಳೆಯುವ ಮಂದಿ, ಅದರ ಬ್ಯಾಟರಿ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳುತ್ತಾರೆ. ಕಾರಣ, ರಾತ್ರಿಯೆಲ್ಲ ಫುಲ್ ಚಾರ್ಚ್ ಮಾಡಿದ್ರೂ ಸಂಜೆ ಆಗುವುದರೊಳಗೆ ಚಾರ್ಚ್ ಖಾಲಿ ಆಗಿರುತ್ತದೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದ ಬೇಸತ್ತು, ಹೊಸ ಮೊಬೈಲ್ಗಳ ಮೊರೆ ಹೋಗುವ ಬಳಕೆದಾರರು, ಪ್ರತಿದಿನ ಮಾಡುವ ಮಿಸ್ಟೇಕ್ ಅನ್ನು ಸರಿಪಡಿಸಿಕೊಂಡರೆ, ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.