More

    ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹ

    ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರ ಮತ್ತು ಸಹ ಶಿಕ್ಷಕರ ಮೂಲ ವೇತನದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಕ.ರಾ.ಪ್ರಾ ಶಾ.ಶಿಕ್ಷಕರ ಸಂಘದ ಪದಾಧಿಕಾರಿಗಳು ಮಂಗಳವಾರ ಡಿಡಿಪಿಐ ಗಜಾನನ ಮನ್ನಿಕೇರಿಗೆ ಮನವಿ ಸಲ್ಲಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಹ ಶಿಕ್ಷಕರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಮೂಲ ವೇತನದಲ್ಲಿ ಸಾಕಷ್ಟು ವ್ಯತ್ಯಾಸಗಳಿದು,್ದ ಸರಿಪಡಿಸಬೇಕು. ಮುಖ್ಯೋಪಾಧ್ಯಾಯರ ವಿಶೇಷ ವೇತನ ಬಡ್ತಿ ವಂಚಿತರಾಗಿದ್ದು, ಮಾಹಿತಿಯನ್ನು ಆರ್ಥಿಕ ಇಲಾಖೆ ಕೇಳಿದೆ. ಆದರೆ ಇಲ್ಲಿಯವರೆಗೆ ಸರ್ಕಾರ ಮಾಹಿತಿ ಕಳುಹಿಸಲ್ಲ. ಆದ್ದರಿಂದ ತುರ್ತಾಗಿ ಆರ್ಥಿಕ ಇಲಾಖೆಗೆ ಮಾಹಿತಿ ಕಳುಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.

    ಶಿಕ್ಷಕರ ಅವಲಂಬಿತರ ವಿವರಗಳನ್ನು ಎಚ್.ಆರ್.ಎಂ.ಎಸ್‌ನಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡುವ ಮತ್ತು ಎ.ಬಿ.ಕೇಂದ್ರಗಳಲ್ಲಿ ಖಾಲಿ ಇರುವ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಸ್ಥಳ ನಿಯೋಜನೆ ಮಾಡುವಂತೆ ಒತ್ತಾಯಿಸಿದರು.

    ಪ್ರಧಾನ ಕಾರ್ಯದರ್ಶಿ ಸಿದ್ರಾಮ ಲೋಕನ್ನವರ, ಸಿ.ಬಿ.ಅರಬಾವಿ, ವೈ.ಎಸ್.ಬುಡ್ಡಗೋಳ, ಎನ್.ಬಿ.ಗುಡಸಿ, ಎಸ್.ಎಸ್.ಖಡ್ಡ, ಬಿ.ಆರ್.ತಳವಾರ, ವಿ.ಬಿ.ಅರಗಿ, ಆರ್.ಎಂ.ಮಹಾಲಿಂಗಪುರ, ಆರ್.ಕೆ.ಕಾಂಬಳೆ, ಬಬಿತಾ ನೂಲಿ, ಎನ್.ಜಿ.ಕಾಂಬಳೆ ಹಾಗೂ ಪದಾಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts