More

    ಐಪಿಎಲ್ ಪ್ರಾಯೋಜಕತ್ವ ರೇಸ್‌ಗೆ ಟಾಟಾ ಗ್ರೂಪ್ ಎಂಟ್ರಿ

    ನವದೆಹಲಿ: ಭಾರತದ ಪ್ರತಿಷ್ಠಿತ ಟಾಟಾ ಗ್ರೂಪ್ ಕಂಪನಿ ಕೂಡ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ ರೇಸ್‌ಗೆ ಪ್ರವೇಶ ಪಡೆದಿದೆ. ಈಗಾಗಲೆ ಬೆಂಗಳೂರು ಮೂಲದ ಅನ್‌ಅಕಾಡೆಮಿ ಆನ್‌ಲೈನ್ ಶಿಕ್ಷಣದ ಕಂಪನಿ ಮತ್ತು ಚೀನಾ ಹೂಡಿಕೆ ಹೊಂದಿರುವ ಭಾರತದ ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್11 ಐಪಿಎಲ್ ಪ್ರಾಯೋಜಕತ್ವ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು.

    ಈ ಮೂರು ಕಂಪನಿಗಳು ಶುಕ್ರವಾರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ದಾಖಲೆಪತ್ರಗಳನ್ನು ಬಿಸಿಸಿಐಗೆ ಸಲ್ಲಿಸಿವೆ. ಬಿಡ್ ಜಯಿಸುವ ಕಂಪನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಪಡೆಯಲಿದ್ದು, ವರ್ಷಾಂತ್ಯದವರೆಗೂ ಈ ಒಪ್ಪಂದ ಹೊಂದಿರಲಿದೆ. ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆರ್ಯುವೇದ ಸಂಸ್ಥೆ ಮತ್ತು ಅಂಬಾನಿ ಅವರ ಜಿಯೋ ಕಂಪನಿ ಕೂಡ ಐಪಿಎಲ್ ಪ್ರಾಯೋಜಕತ್ವಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದರೂ, ಇದುವರೆಗೆ ಬಿಡ್ ಸಲ್ಲಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ.

    ಟಾಟಾ ಗ್ರೂಪ್ ರೇಸ್‌ಗೆ ಎಂಟ್ರಿ ಪಡೆದಿರುವುದರಿಂದ ಆಗಸ್ಟ್ 18ರಂದು ಬಿಸಿಸಿಐ ೋಷಿಸಲಿರುವ ಐಪಿಎಲ್ ಪ್ರಾಯೋಜಕತ್ವ ವಿಜೇತರ ಲಿತಾಂಶ ಕುತೂಹಲ ಹೆಚ್ಚಿಸಿದೆ. ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಈ ಮುನ್ನ ಬಿಸಿಸಿಐ ಜತೆಗೆ ವಾರ್ಷಿಕ 440 ಕೋಟಿ ರೂ. ಒಪ್ಪಂದ ಹೊಂದಿತ್ತು. ಆದರೆ ಗಡಿ ಗಲಾಟೆಯ ಬಳಿಕ ಚೀನಾ ವಿರುದ್ಧ ಎದ್ದ ಜನಾಕ್ರೋಶದಿಂದಾಗಿ ವಿವೋ ಕಂಪನಿ ಈ ವರ್ಷದ ಪ್ರಾಯೋಜಕತ್ವ ತ್ಯಜಿಸಿದೆ.

    ಇದನ್ನೂ ಓದಿ: ಐಪಿಎಲ್​ ವೇಳೆ 10 ಸೆಕೆಂಡ್​ ಜಾಹೀರಾತು ಬೆಲೆ ಎಷ್ಟಿದೆ ಗೊತ್ತಾ..?

    ಮೂರು ಕಂಪನಿಗಳು ಶುಕ್ರವಾರ ಪ್ರಾಥಮಿಕವಾದ ಬಿಡ್ ದಾಖಲೆಪತ್ರಗಳನ್ನು ಸಲ್ಲಿಸಿವೆ. ಬಿಸಿಸಿಐ ಇನ್ನು ಈ ಪ್ರಾಯೋಜಕತ್ವ ಹಕ್ಕಿನ ಬಗ್ಗೆ ಅವುಗಳಿಗೆ ವಿವರಣೆಗಳನ್ನು ನೀಡಲಿವೆ. ಬಳಿಕ ಆಗಸ್ಟ್ 18ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡುವೆ ಅಂತಿಮ ಬಿಡ್ ಸಲ್ಲಿಸಲಿವೆ. ನಂತರ ಬಿಸಿಸಿಐ ಬಿಡ್ ವಿಜೇತರ ಹೆಸರನ್ನು ೋಷಿಸಲಿದೆ. ಆದರೆ ಗರಿಷ್ಠ ಬಿಡ್ ಸಲ್ಲಿಸುವವರೇ ಹಕ್ಕು ಪಡೆದುಕೊಳ್ಳುವರು ಎಂಬ ಖಚಿತತೆ ಇರುವುದಿಲ್ಲ ಎಂದು ಬಿಸಿಸಿಐ ಈಗಾಗಲೆ ಸ್ಪಷ್ಟಪಡಿಸಿದೆ. ವಿಶ್ವಾಸಾರ್ಹ ಕಂಪನಿಗಳ ಬಿಡ್ ಮಾತ್ರ ಸ್ವೀಕರಿಸುತ್ತೇವೆ. ಜತೆಗೆ ಚೀನಾ ಹೂಡಿಕೆಗಳ ಬಗ್ಗೆಯೂ ಪರಿಶೀಲನೆಗಳು ನಡೆಯಲಿವೆ. ಇಲ್ಲದಿದ್ದರೆ ವಿವೋ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟಿರುವುದು ಅರ್ಥ ಕಳೆದುಕೊಳ್ಳಲಿದೆ ಎಂದು ಬಿಸಿಸಿಐ ವಿವರಿಸಿದೆ.

    ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಕನಿಷ್ಠ 300 ಕೋಟಿ ರೂಪಾಯಿಯಿಂದ 350 ಕೋಟಿ ರೂ.ವರೆಗಿನ ಬಿಡ್ ನಿರೀಕ್ಷೆಯಲ್ಲಿದೆ. ಅಲ್ಲದೆ ಇಷ್ಟು ಮೊತ್ತದ ಬಿಡ್ ಬಂದರೆ ತನ್ನ ಗೆಲುವೆಂದೇ ಪರಿಗಣಿಸಲಿದೆ. ಯಾಕೆಂದರೆ ಈ ಒಪ್ಪಂದ ಅವಧಿ ಕೇವಲ 4 ತಿಂಗಳು ಮತ್ತು 13 ದಿನಗಳ ಕಾಲ ಮಾತ್ರ ಇರಲಿದೆ.

    VIDEO | ಕೊಹ್ಲಿ-ಅನುಷ್ಕಾ ನಡುವೆ ಜಗಳವಾದರೆ ಮೊದಲು ಸಾರಿ ಕೇಳೋದು ಯಾರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts