More

    ತಮಿಳುನಾಡಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ನೇಣಿಗೆ ಶರಣು; ಸಾವಿನ ಕಾರಣ ಏನು ಗೊತ್ತಾ?

    Tamilnadu: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 27 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶುಕ್ರವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.


    ತಮಿಳುನಾಡಿನ ಶ್ರೀ ಮೂಕಾಂಬಿಕಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (SMIMS) 2ನೇ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


    ಆಕೆಯ ಬಳಿಯಿದ್ದ ಡೆತ್​​ನೋಟನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಈ ಡೆತ್​​ ನೋಟ್​​ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.
    ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್‍ನೋಟ್‍ನಲ್ಲಿ ಸಾವಿಗೆ ಕಾರಣವನ್ನು ತಿಳಿಸಿರುವ ವಿದ್ಯಾರ್ಥಿನಿ ಹಲವರ ಹೆಸರುಗಳನ್ನು ಉಲ್ಲೆಖಿಸಿದ್ದಾಳೆ. ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿನಿಯರ್‍ಗಳು ನನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮಾನಸಿಕವಾಗಿ ನಿಂದಿಸಿದ್ದಾರೆ’ ಎಂದು ಸಾವನ್ನಪ್ಪಿದ ವಿದ್ಯಾರ್ಥಿನಿ ಡೆತ್​​​ನೋಟ್​​​ನಲ್ಲಿ ಬರೆದಿದ್ದಾಳೆ.


    ವಿದ್ಯಾರ್ಥಿನಿ ಬರೆದ ಪತ್ರದಲ್ಲಿ ಏನಿತ್ತು?
    ಮೃತ ವಿದ್ಡೆಯಾರ್ತ್‍ಥಿನಿ ಡೆತ್​​ ನೋಟ್​​​ನಲ್ಲಿ ಹಲವರ ಹೆಸರುಗಳನ್ನು ಉಲ್ಲೆಖಿಸಿದ್ದಾಳೆ. ‘ನನ್ನ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿನಿಯರ್‍ಗಳು ನನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮಾನಸಿಕವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿದ್ದಾಳೆ. ‘ಕ್ಷಮಿಸಿಬಿಡಿ ಅಪ್ಪಾ.. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ’ ಅಂತಾ ಹೇಳಿದ್ದಾಳೆ. ‘ಖಿನ್ನತೆಯಿರುವ ಜನರು ಸಹ ಸಂತೋಷವಾಗಿರುವುದನ್ನು ಕಾಣಬಹುದು. ದಯೆಯಿಂದಿರಿ, ನಿರ್ಣಯಿಸಬೇಡಿ. ನಿಮ್ಮ ಕುಟುಂಬಕ್ಕಾಗಿ ಖುಷಿಯಿಂದ ಇರಿ’ ಎಂದು ಬರೆದಿದ್ದಾಳೆ.


    ಡೆತ್‍ನೋಟ್‍ ಆಧರಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆಕೆ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿರುವ ಜನರ ವಿಚಾರಣೆ ನಡೆಸುತ್ತಿದ್ದಾರೆ.
    ತಮಿಳುನಾಡು ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ರವಿ ಅವರ ಗಮನ ಸೆಳೆದಿದೆ. ಅವರು ಸಹ ವಿದ್ಯಾರ್ಥಿನಿಯ ಡೇತ್‍ನೋಟ್‍ಅನ್ನು ಎಕ್ಸ್​​(ಟ್ವಿಟ್ಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts