More

    ಯುವಕರು ಕ್ರೀಡಾಭಿಮಾನ ಬೆಳೆಸಿಕೊಳ್ಳಲಿ

    ತಾಳಿಕೋಟೆ: ಯುವಕರು ಕ್ರೀಡಾಭಿಮಾನ ಬೆಳೆಸಿಕೊಳ್ಳುವ ಜತೆಗೆ ತೆಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಬೇಕೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.

    ಪಟ್ಟಣದ ಅಂಜುಮನ್ ಕಾಲೇಜು ಮೈದಾನದಲ್ಲಿ ದಿ.ಮುಸ್ಲಿಂ ಬ್ಯಾಂಕ್ ಉಪಾಧ್ಯಕ್ಷ ಯಾಜ್ ಉತ್ನಾಳ ಗೆಳೆಯರ ಬಳಗದವತಿಯಿಂದ ಆಯೋಜಿಸಲಾದ ನ್ಯೂ ಗೋಲ್ಡನ್ ಟ್ರೋಫಿ 2020-21 ಟೆನಿಸ್ ಬಾಲ್ ಒಪನ್ ಟೂರ್ನಾಮೆಂಟ್ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಕ್ರೀಡೆಯು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ಅಲ್ಲದೆ, ಉತ್ತಮ ಆರೋಗ್ಯವಂತ ಬದುಕನ್ನು ರೂಪಿಸಿಕೊಡುತ್ತದೆ ಎಂದರು. ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ(ಯಾಳಗಿ) ಮಾತನಾಡಿ, ಕ್ರೀಡೆಗಳು ಮನುಷ್ಯನ ದೈಹಿಕ ವಿಕಸನ ದೊಂದಿಗೆ ಮಾನಸಿಕ ವಿಕಸನಕ್ಕೂ ಸಹಕಾರಿಯಾಗಿವೆ. ಕ್ರೀಡೆ ಕೇವಲ ಆರೋಗ್ಯವಂತ ಶಕ್ತಿ ಕೊಡುವುದಷ್ಟೆ ಅಲ್ಲ, ಒಬ್ಬ ಮನುಷ್ಯನನ್ನಾಗಿ ರೂಪಿಸುವಂತಹ ಶಕ್ತಿಯೂ ಅದರಲ್ಲಿ ಅಡಗಿದೆ ಎಂದರು.

    ಈದ್ಗಾ ಸಮಿತಿ ಸದಸ್ಯ ಕೆ.ಎಂ. ಡೋಣಿ, ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಸೈಯದ್ ಶಕೀಲಹ್ಮದ್ ಖಾಜಿ, ರೋಶನ್ ಡೋಣಿ ಮಾತನಾಡಿದರು. ಅಂಜುಮನ್ ಎ ಇಸ್ಲಾಮ್ ಟ್ರಸ್ಟ್ ಸಮಿತಿ ಅಧ್ಯಕ್ಷ ಅಬ್ದುಲ್‌ರಜಾಕ್ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಯುವಮುಖಂಡ ಚಿನ್ನುಧನಿ ನಾಡಗೌಡ(ಬಸರಕೋಡ) ಕಾರ್ಯಕ್ರಮ ಉದ್ಘಾಟಿಸಿದರು.

    ಮುರುಘೇಶ ವಿರಕ್ತಮಠ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ), ಪುರಸಭೆ ಉಪಧ್ಯಕ್ಷ ಮುಸ್ತಾ ಚೌದ್ರಿ, ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಅಣ್ಣಾಜಿ ಜಗತಾಪ, ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಕಾಶಿನಾಥ ಸಜ್ಜನ, ಪ್ರಭುಗೌಡ ಮದರಕಲ್ಲ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಂಜೂರ ಬೇಪಾರಿ, ಬಿಜೆಪಿ ನಗರ ಘಟಕ ಅಧ್ಯಕ್ಷ ರಾಘವೇಂದ್ರ ಚವಾಣ್, ಮಂಜುನಾಥ ಶೆಟ್ಟಿ, ಕಾಶಿನಾಥ ಮುರಾಳ, ಬಸವರಾಜ ಕಟ್ಟಿಮನಿ, ವಿಜಯಸಿಂಗ್ ಹಜೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts