More

    500 ರೂ. ಪ್ರೋತ್ಸಾಹಧನ ನೀಡುವಂತೆ ಒತ್ತಾಯ

    ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 1835 ರೂ. ನಿಗದಿ ಮಾಡಿರುವುದು ಅವೈಜ್ಞಾನಿಕ. ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿಯಾಗಿ 500 ರೂಪಾಯಿ ಪ್ರೋತ್ಸಾಹ ಧನ ನೀಡುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
    ರೈತರ ಸಮಸ್ಯೆಗಳನ್ನು ಚರ್ಚಿಸಲು ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ರೈತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಜನವರಿ 1ರಿಂದ ಭತ್ತ ಖರೀದಿ ಕೆಂದ್ರ ಆರಂಭಿಸಲಿದೆಯಾದರೂ ಭತ್ತ ಖರೀದಿಗೆ ರೈತ ಪಹಣಿ ಜಮೀನಿನಲ್ಲಿ ಭತ್ತ ಬೆಳೆದಿದ್ದೇನೆ ಎಂದು ನೋಂದಾಯಿಸಿರಬೇಕು ಎಂಬ ನಿಯಮ ರೈತರಿಗೆ ಅನಾನುಕೂಲವಾಗಲಿದೆ.
    ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ನೀಡಿರುವುದು ರೈತರಿಗೆ ಅನ್ಯಾಯವಾಗಲಿದ್ದು, ಮಾರ್ಗಸೂಚಿ ಬದಲಾಗಬೇಕು. ರಾಜ್ಯದಲ್ಲಿ ಭತ್ತ ಬೆಳೆಯುವ ರೈತರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚಿದೆ. ತೊಗರಿ ಬೆಳೆಗೆ 300 ರೂ.ಪ್ರತಿ ಕ್ವಿಂಟಾಲ್‌ಗೆ ಪ್ರೋತ್ಸಾಹ ಧನ ಸಿಗುತ್ತಿದೆ. ಅವರಿಗೆ ಪ್ರೋತ್ಸಾಹ ಧನ ಸಿಗದಿದ್ದರೆ ಅನ್ಯಾಯವಾಗುತ್ತದೆ ಎಂದು ಹೇಳಿದರು
    ಇದೇ ವೇಳೆ ಭತ್ತ ಖರೀದಿಸುವ ಮಧ್ಯವರ್ತಿಗಳು ತೂಕ ಮಾಡುವ ಪ್ರತಿ ಚೀಲಕ್ಕೆ 2-3 ಕೆ.ಜಿ.ತೂಕ ವ್ಯತ್ಯಾಸ ಮಾಡಿ ರೈತರನ್ನು ವಂಚಿಸುತ್ತಿರುವ ಆರೋಪವಿದೆ. ತೂಕ ಮತ್ತು ಅಳತೆ ಮಾಪನಾಧಿಕಾರಿಗಳು ವಿಶೇಷ ತಂಡಗಳನ್ನು ಮಾಡಿಕೊಂಡು ಗ್ರಾಮೀಣ ಪ್ರದೇಶಕ್ಕೆ ಭೇಟಿ ಪರಿಶೀಲಿಸಿ ರೈತರಿಗೆ ಆಗುವ ಅನ್ಯಾಯ ತಪ್ಪಿಸುವಂತೆ ಹಾಗೂ ಅನ್ಯಾಯ ಕಂಡು ಬಂದಲ್ಲಿ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಸಭೆಯಲ್ಲಿ ಒತ್ತಾಯಿಸಿದರು.
    ಕಬ್ಬು ಕಟಾವು ದರವನ್ನು ಟನ್‌ಗೆ 680 ರೂ.ಗೆ ಏರಿಕೆ ಮಾಡಿ ಕಬ್ಬು ಬೆಳೆಯುವ ರೈತರನ್ನು ಬಣ್ಣಾರಿ ಅಮ್ಮನ್ ಕಾರ್ಖಾನೆಯವರು ಶೋಷಣೆ ಮಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿದಿದ್ದರೆ ಕಾರ್ಖಾನೆ ಮುಂದೆ ಚಳವಳಿ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ರಂಗಸಮುದ್ರ ಸುರೇಶ್, ಬಿ.ಪಿ.ಪರಶಿವಮೂರ್ತಿ, ಪ್ರಸಾದ್ ನಾಯ್ಕ, ರಂಗರಾಜು, ವಿರೇಶ್, ಕೃಷ್ಣಪ್ಪ, ಜವನಯ್ಯ, ರಂಗಸಮುದ್ರ ರೇವಣ್ಣ, ಶಂಭುದೇವನಪುರ ನಂಜುಂಡಸ್ವಾಮಿ, ಬನ್ನೂರು ಕೃಷ್ಣಪ್ಪ, ಅರುಣ್, ನವೀನ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts