More

    ಅಲೆಮಾರಿಗಳಿಗೆ ಸ್ವಾಮೀಜಿ ನೆರವು: ಚಿ.ನಾ.ಹಳ್ಳಿ ತಾಲೂಕಿನ ಬೋರನಕಣಿವೆಯಲ್ಲಿ ಆಹಾರ ಸಾಮಗ್ರಿ ವಿತರಣೆ

    ತುಮಕೂರು :  ಜನತಾಕರ್ಯ್ೂ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಲೆಮಾರಿಗಳಿಗೆ ಇನ್ಫೋಸಿಸ್ ೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ, ಪಾವಗಡ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದಜೀ ಹಾಗೂ ವಿಜಯವಾಣಿ ಸಹಯೋಗದಲ್ಲಿ ಆಹಾರ ಸಾಮಗ್ರಿ ನೀಡುವ ಅಭಿಯಾನ ಮುಂದುವರಿಯಿತು.

    ಮಂಗಳವಾರ ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿ ವೆಯಲ್ಲಿ ಸುಡಗಾಡಸಿದ್ಧ ಹಾಗೂ ಸಿಳ್ಳೇಕ್ಯಾತ ಸಮುದಾಯದ ಎಲ್ಲ ಕುಟುಂಬಗಳಿಗೆ ುಡ್‌ಕಿಟ್ ವಿತರಿಸಿ ಮಾತನಾಡಿದ ಡಾ. ಜಪಾನಂದಜೀ, ಇನ್ಫೋಸಿಸ್ ೌಂಡೇಷನ್ ಡಾ. ಸುಧಾಮೂರ್ತಿ ಅವರ ನೆರವಿನೊಂದಿಗೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ನಮ್ಮ ಅಭಿಯಾನ ಚಿಕ್ಕನಾಯಕನಹಳ್ಳಿಯೂ ಮುಂದುವರಿದಿದೆ ಎಂದರು.

    ವಿಜಯವಾಣಿ ಪತ್ರಿಕೆ ಬೆಳಕುಚೆಲ್ಲಿದ ಅಲೆ ಮಾರಿಗಳ ಸಂಕಷ್ಟವನ್ನು ಅರಿತು ಅವರಿಗೆಲ್ಲಾ ಆಹಾರದ ಕಿಟ್ ನೀಡುವ ನಮ್ಮ ಸಂಕಲ್ಪ ಮುಂದುವರಿಯಲಿದ್ದು ಈಗಾಗಲೇ ತುಮಕೂರ ಜಿಲ್ಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು, ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಬಡವರಿಗೆ ನೆರವು ನೀಡಲಾಗುತ್ತಿದೆ ಎಂದರು.

    ಹುಳಿಯಾರು ಪಟ್ಟಣದ ಶಂಕರಾಪುರ, ರಾಮಗೋಪಾಲ್ ಸರ್ಕಲ್, ಒಣಕಾಲುವೆಯಲ್ಲಿ ವಾಸವಿದ್ದ ಪಿಂಜಾರ, ದರ್ವೇಸಿ, ಸಿಳ್ಳೆಕ್ಯಾತ, ಕೊರಮ, ಚನ್ನದಾಸ, ಎಳವ ಕುಟುಂಬಗಳಿಗೆ ಹಾಗೂ ಡಿಂಕನಹಳ್ಳಿ ಮತ್ತು ಹನುಮಂತಪುರದ ಸಿಳ್ಲೇಕ್ಯಾತ ಕುಟುಂಬಗಳಿಗೆ ಖುದ್ದು ಸ್ವಾಮೀಜಿ ಅವರೇ ನೇತೃತ್ವ ವಹಿಸಿ ಪಡಿತರ ಕಿಟ್‌ಗಳನ್ನು ವಿತರಿಸಿದರು. ಎಲ್ಲರೂ ಜಾಗೃತೆಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ, ನಿಮ್ಮೊಂದಿಗೆ ದೇಶ, ರಾಜ್ಯದ ಜನರು ಆರೋಗ್ಯದಿಂದರಬೇಕಾದರೆ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ. ಕಡ್ಡಾಯವಾಗಿ ವಾಸ್ಕ್ ಹಾಕಿಕೊಳ್ಳಿ, ಪರಸ್ಪರ ಅಂತರ ಪಾಲಿಸಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದರು.

    ‘ಜನತಾಕರ್ಯ್ೂ ಹಿನ್ನೆಲೆಯಲ್ಲಿ ಅಲೆವಾರಿಗಳಿಗೆ ದುಡಿಮೆಯಿಲ್ಲದೆ ದಿನದ ಊಟಕ್ಕೆ ಪರದಾಡುವ ಸ್ಥಿತಿ ನಿರ್ವಾಣವಾಗಿದೆ, ಅಲೆಮಾರಿಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಕಾರಣಕ್ಕೆ ಮನೆಗೆ ಅಗತ್ಯವಾದ ಆಹಾರದ ಕಿಟ್ ನೀಡಲಾಗಿದೆ, ಹಸಿದವರಿಗೆ ಅನ್ನ ನೀಡಲು ಡಾ.ಸುಧಾಮೂರ್ತಿ ಗುಣಮಟ್ಟದ ಆಹಾರವನ್ನೇ ನೀಡುತ್ತಿದ್ದು ಎಲ್ಲರೂ ಮನೆಯಲ್ಲಿಯೇ ಉಳಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಆಹಾರ ಕಿಟ್ ಪಡೆದ ಅಲೆಮಾರಿಗಳು ಸ್ವಾಮೀಜಿ ಅವರಿಗೆ ಕೃತಜ್ಞತೆ ಅರ್ಪಿಸಿದರು, ಕೆಲವು ದಿನಗಳಿಂದ ಅಲೆಮಾರಿಗಳು ಗ್ರಾಮಗಳಿಗೆ ತೆರಳಲು ಅವಕಾಶವಿಲ್ಲ. ಹಾಗಾಗಿ, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ವಿಜಯವಾಣಿ ನಮ್ಮ ಕಷ್ಟ ಅರಿತು ವರದಿ ಪ್ರಕಟಿಸಿದ್ದು ದಾನಿಗಳ ಕಣ್ತೆರಿಸಿದ್ದು ಡಾ.ಜಪನಾಂದಜೀ ದೇವರಂತೆ ಬಂದಿದ್ದಾರೆ ಎಂದು ಬೋರನಕಣಿವೆಯಲ್ಲಿ ಅಲೆಮಾರಿ ಸಮುದಾಯದ ಯುವಕ ರವಿಕುಮಾರ್ ಕೃತಜ್ಞತೆ ಅರ್ಪಿಸಿದರು. ಅಲೆಮಾರಿ ಸಮುದಾತದ ಪ್ರಮುಖರಾದ ರಾಜಣ್ಣ, ಕರಿಯಪ್ಪ, ರಾಮಕೃಷ್ಣ ಸೇವಾಶ್ರಮದ ಸ್ವಯಂಸೇವಕ ಶ್ರೀನಿವಾಸ್, ಹುಳಿಯಾರು ಯೋಗಿಶ್ ಮತ್ತಿತರರು ಇದ್ದರು.

     

    ವಿಜಯವಾಣಿ ಸಹಯೋಗ : ಜಿಲ್ಲೆಯಲ್ಲಿರುವ 12 ಅಲೆಮಾರಿ ಸಮುದಾಯಗಳ 600ಕ್ಕೂ ಹೆಚ್ಚು ಕುಟುಂಬಗಳು ಊಟಕ್ಕೂ ಪರದಾಡುವ ಸ್ಥಿತಿ ಇರುವ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ಆ ಸಮುದಾಯಗಳಿಗೆ ನೆರವಾಗುವ ಕೈಂಕರ್ಯದಲ್ಲಿ ನಿರಂತರ ಸಂಪರ್ಕದಲ್ಲಿದೆ. ಇನ್ಫೋಸಿಸ್ ೌಂಡೇಷನ್, ಪಾವಗಡ ರಾಮಕೃಷ್ಣ ಸೇವಾಶ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts