More

    ಸೋಂಕಿರಿಗೆ ಆತ್ಮಸ್ಥೈರ್ಯ ತುಂಬಿದ ಸಿದ್ದಲಿಂಗ ಶ್ರೀಗಳು

    ತುಮಕೂರು : ಬಸವ ಜಯಂತಿ ಹಿನ್ನೆಲೆಯಲ್ಲಿ ಸಿದ್ಧಗಂಗಾ ಕೋವಿಡ್ ಕೇರ್ ಸೆಂಟರ್ ಹಾಗೂ ಸಿದ್ಧಗಂಗಾ ಆಸ್ಪತ್ರೆಯಲ್ಲಿರುವ ಕರೊನಾ ಸೋಂಕಿತರನ್ನು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಶುಕ್ರವಾರ ಆರೋಗ್ಯ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿದರು.

    ಶ್ರೀಮಠದ ಯಾತ್ರಿ ನಿವಾಸದಲ್ಲಿನ 80 ಹಾಸಿಗೆಯುಳ್ಳ ಉಚಿತ ಕೋವಿಡ್ ಸೆಂಟರ್‌ಗೆ ಬೆಳಗ್ಗೆ 11ಕ್ಕೆ ಭೇಟಿ ನೀಡಿದ ಶ್ರೀಗಳು, ಕೆಲಕಾಲ ಅಲ್ಲಿನ ಸಿಬ್ಬಂದಿ ಜತೆಗೆ ಮಾತನಾಡಿ, ಸೋಂಕಿತರ ಆರೈಕೆ ಮಾಡುತ್ತಿರುವ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ನಂತರ ಸೋಂಕಿತರಿಗೆ ಧೈರ್ಯ ತುಂಬಿದ್ದಲ್ಲದೆ, ಹಣ್ಣುಹಂಪಲು ವಿತರಿಸಿ ಕರೊನಾ ಚೇತರಿಸಿಕೊಂಡು ಗೆದ್ದುಬರುವಂತೆ ಮಾನಸಿಕಸ್ಥೈರ್ಯ ತುಂಬಿದರು.

    ಪಿಪಿಇ ಕಿಟ್ ಧರಿಸಿದ ಶ್ರೀಗಳು: ಸಿದ್ಧ್ದಗಂಗಾ ಆಸ್ಪತ್ರೆಗೆ ಮಧ್ಯಾಹ್ನ ಭೇಟಿ ನೀಡಿದ ಸಿದ್ಧಲಿಂಗ ಶ್ರೀಗಳು, ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಹಾಗೂ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 150ಕ್ಕೂ ಹೆಚ್ಚು ರೋಗಿಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸೋಂಕಿತರಿಗೆ ಪ್ರಾಣಾಯಾಮ, ಧ್ಯಾನ ಮಾಡುವಂತೆ ಸಲಹೆ ನೀಡಿದ ಶ್ರೀಗಳು, ಸೋಂಕಿತರ ಆರೋಗ್ಯ ಸ್ಥಿತಿಗತಿಗಳನ್ನು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್ ಅವರಿಂದ ಪಡೆದರು. ಶ್ರೀಗಳ ಭೇಟಿ ವೇಳೆ ಡಾ.ಶಾಲಿನಿ, ನಸಿರ್ಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಸಿಇಒ ಡಾ.ಸಂಜೀವ್ ಕುಮಾರ್ ಇದ್ದರು.

    ಮನುಷ್ಯನಿಗೆ ರೋಗ ಬರದೇ ಇರಬೇಕು ಎಂದರೆ ಹೇಗೆ, ಅದರ ವಿರುದ್ಧ ಹೋರಾಡುವ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಯಾವುದೇ ಕಾಯಿಲೆ ಬಂದರೂ ಅದು ಪ್ರಥಮ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರಲ್ಲಿ ಶ್ರದ್ಧೆ, ವಿಶ್ವಾಸ, ಕಾಯಕದಲ್ಲಿ ಶುದ್ಧಿ ಇಟ್ಟುಕೊಂಡು ಬಂದ ಎಲ್ಲ ಪಿಡುಗಳನ್ನ ಎದುರಿಸುವ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು.
    ಸಿದ್ದಲಿಂಗ ಶ್ರೀಗಳು ಸಿದ್ಧಗಂಗಾ ಮಠಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts