More

    ಸ್ವಾಮಿ ಪೂರ್ಣಕಾಮಾನಂದಜಿ ಮಹಾಸಮಾಧಿ

    ಮಂಗಳೂರು: ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿ, ಮಂಗಳೂರು ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷರಾದ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್(81) ಗುರುವಾರ ಬೆಳಗ್ಗೆ ಬೆಳಗ್ಗೆ 6.15ಕ್ಕೆ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದರು.

    ಮೂಲತಃ ಬಾಗಲಕೋಟೆಯವರಾದ ಅವರು ಶ್ರೀ ರಾಮಕೃಷ್ಣ – ವಿವೇಕಾನಂದರ ತತ್ವಾದರ್ಶಗಳಿಂದ ಪ್ರಭಾವಿತರಾಗಿ 1969ರಲ್ಲಿ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿ ಪಡೆದು ಮುಂಬೈ ರಾಮಕೃಷ್ಣ ಮಠಕ್ಕೆ ಬ್ರಹ್ಮಚಾರಿಯಾಗಿ ಸೇರಿದರು. ರಾಮಕೃಷ್ಣ ಮಹಾಸಂಘದ 10ನೆೇ ಅಧ್ಯಕ್ಷರಾಗಿದ್ದ ಸ್ವಾಮಿ ವೀರೇಶ್ವರಾನಂದಜಿ ಅವರಿಂದ ಮಂತ್ರದೀಕ್ಷೆ ಪಡೆದರು. 1978ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮುಂಬೈ, ಅರುಣಾಚಲಪ್ರದೇಶ ಮತ್ತು ಮಾರಿಷಸ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.

    1980ರಲ್ಲಿ ಮಂಗಳೂರಿಗೆ ಆಗಮಿಸಿದ ಸ್ವಾಮೀಜಿ, ಸ್ವಾಮಿ ಸುಂದಾನಂದಜಿಯವರ ನಂತರ 1998ರಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿ ನಿಯುಕ್ತರಾದರು. ಪೂಜ್ಯರ ಅಧ್ಯಕ್ಷಾವಧಿಯಲ್ಲಿ ಮಠದಲ್ಲಿ ಭವ್ಯವಾದ ಸಭಾಂಗಣ, ಗ್ರಂಥಾಲಯ ಮತ್ತು ಪುಸ್ತಕ ಮಳಿಗೆ ನಿರ್ಮಾಣಗೊಂಡಿತು. ಸ್ವಾಮೀಜಿಯವರ ಸಹೃದಯ ವ್ಯಕ್ತಿತ್ವದಿಂದಾಗಿ ಶ್ರೀರಾಮಕೃಷ್ಣರ ಭಾವ ಪ್ರಚಾರವು ಮಂಗಳೂರಿನಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ 2010ರಲ್ಲಿ ತಮ್ಮ ಅಧ್ಯಕ್ಷ ಸ್ಥಾನವನ್ನು ಸ್ವಾಮಿ ಜಿತಕಾಮಾನಂದಜಿ ಅವರಿಗೆ ಹಸ್ತಾಂತರಿಸಿ ನಿವೃತ್ತಿ ಪಡೆದರು.

    ಮಂಗಳೂರು ರಾಮಕೃಷ್ಣ ಮಠದಲ್ಲಿ ಗುರುವಾರ ಅಪರಾಹ್ನ 3 ಗಂಟೆಗೆ ಭಕ್ತರ ಅಂತಿಮ ದರ್ಶನದ ಬಳಿಕ ಸ್ವಾಮೀಜಿಯವರ ಅಂತಿಮ ಕ್ರಿಯೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts