More

    ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಕಾಂಗ್ರೆಸ್‌ಗೆ ಬೆಂಬಲಿಸಿ

    ಚಿಕ್ಕಮಗಳೂರು: ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಹಾಗೂ ಕೇಂದ್ರದ ಸರ್ವಾಧಿಕಾರಿ ಧೋರಣೆ ಕೊನೆಗೊಳಿಸಲು ಕ್ಷೇತ್ರದ ಜನತೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಕರೆನೀಡಿದರು.

    ನಗರದ ಕಲ್ಲುದೊಡ್ಡಿಯ ಶಾಂತಿನಗರ ಬಡಾವಣೆಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಭವ್ಯ ಭಾರತವನ್ನು ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಜನತೆ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
    ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್‌ಗೆ ಸಂಪೂರ್ಣ ಸಹಕಾರ ನೀಡಬೇಕು. ರಾಜ್ಯದಲ್ಲಿ ಕೈಗೊಂಡಿರುವ ಗ್ಯಾರಂಟಿ ಅನುಷ್ಟಾನದ ಮಾದರಿಯಲ್ಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರ ಪರ ಕಾಳಜಿ ಹೊಂದಿ ಅನೇಕ ಸವಲತ್ತುಗಳ ಪ್ರಕಟಿಸಿದೆ. ಇದರಿಂದ ದೇಶ ಹಾಗೂ ರಾಜ್ಯದ ಎರಡು ಕಡೆಯಿಂದ ಜನತೆಗೆ ಅನುಕೂಲವಾಗಲಿದೆ ಎಂದರು.
    ದೈನAದಿನ ಜೀವನದಲ್ಲಿ ಪ್ರತಿಯೊಂದು ವಸ್ತುಗಳನ್ನು ಖರೀದಿಸುವ ಮುನ್ನ ಗುಣಮಟ್ಟವನ್ನು ಪರಿಶೀಲಿಸುವ ಜನತೆ, ಮತದಾನದ ವಿಚಾರದಲ್ಲಿ ತಾಳ್ಮೆ ವಹಿಸಿ ಸೂಕ್ತ ಅಭ್ಯರ್ಥಿ ಗುರುತಿಸಿ ಆಯ್ಕೆಮಾಡಬೇಕು. ದಿನನಿತ್ಯ ಆಹಾರ ಪದಾರ್ಥಗಳ ಬೆಲೆಯನ್ನು ಏರಿಸಿ ಬಿಜೆಪಿ ಸರ್ಕಾರ ಜನರನ್ನು ಶೋಷಣೆ ಮಾಡುತ್ತಿದೆ. ಬಡವರು ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕೃತವಾಗಿಯೇ ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದಿರುವ ಕೇಂದ್ರ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
    ಕಾಂಗ್ರೆಸ್ ಪಕ್ಷವು ದೇಶದ ಪ್ರತಿಯೊಂದು ಜಾತಿ, ಧರ್ಮ ಸೇರಿದಂತೆ ಎಲ್ಲರೂ ಸಮಾನರು ಎಂದು ಸಾರುವ ನಿಲುವನ್ನು ಹೊಂದಿದೆ. ಸ್ಥಳೀಯ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ ಕೂಡಾ ಸರಳ ಮನೋಭಾವದ ವ್ಯಕ್ತಿತ್ವದವರು. ಬಡವರು ಹಾಗೂ ದೀನ ದಲಿತರ ಪರವಾದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಜೊತೆಗೆ ಜನಸಾಮಾನ್ಯರ ಕೆಲಸಕ್ಕೆ ಸದಾಕಾಲ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಇಂಥವರನ್ನು ಗೆಲ್ಲಿಸಲು ಮತದಾರರು ಮುಂದೆಬರಬೇಕು ಎಂದರು.
    ನಗರಸಭೆ ಮಾಜಿ ಸದಸ್ಯೆ ಹೇಮಾವತಿ ಮಾತನಾಡಿ, ಅನ್ನದಾನದಂತೆ ಮತದಾನವು ಶ್ರೇಷ್ಟವಾದದ್ದು. ಇಂದಿನ ಕುಟುಂಬ ನಿರ್ವಹಣೆ ಮಾಡಲು ಜನ ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಲು ಕೇಂದ್ರ ಸರ್ಕಾರವೇ ಕಾರಣ. ಮಕ್ಕಳ ವಿದ್ಯಾಭ್ಯಾಸ, ದಿನೋಪಯೋಗಿ ವಸ್ತುಗಳ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಇವುಗಳನ್ನು ನಿಯಂತ್ರಿಸಲು ಕೇವಲ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
    ಕಾಂಗ್ರೆಸ್ ಮುಖಂಡರಾದ ಕುಸುಮಾ ಭರತ್ ಮಾತನಾಡಿ, ಮತದಾರರು ಆಮಿಷಗಳಿಗೆ ಒಳಗಾಗದೇ ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಮತಯಾಚಿಸಬೇಕು. ಕೆಲವರು ಹಣ, ಹೆಂಡದ ಆಮಿಷವೊಡ್ಡಿ ಮತ ಸೆಳೆಯುವ ಹುನ್ನಾರ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಸೌಹಾರ್ದಯುತ ವಾತಾವರಣ ಸೃಷ್ಟಿಸಲು ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದರು.
    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಮಾರ್, ಜಯಂತಿ, ಮಲ್ಲಿಕಾ ದೇವಿ, ಸುಶೀಲಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts