ಕರೊನಾ ವೈರಸ್​ ಅನ್ನು ಬಹು ಬೇಗನೆ ಕೊಲ್ಲುವ ಸಾಮರ್ಥ್ಯ ಸೂರ್ಯನ ಬೆಳಕಿದೆ: ಯುಎಸ್​ ವಿಜ್ಞಾನಿಗಳು

blank

ವಾಷಿಂಗ್ಟನ್​: ಮಹಾಮಾರಿ ಕರೊನಾ ವೈರಸ್​ ಅನ್ನು ಬಹುಬೇಗ ನಾಶಪಡಿಸುವ ಸಾಮರ್ಥ್ಯ ಸೂರ್ಯನ ಬೆಳಕಿಗೆ ಇದೆ ಎಂದು ವಾದಿಸಿರುವ ನೂತನ ಸಂಶೋಧನೆಯನ್ನು ಅಮೆರಿಕದ ಹಿರಿಯ ಅಧಿಕಾರಿಗಳು ಗುರುವಾರ ಘೋಷಣೆ ಮಾಡಿದ್ದಾರೆ. ಹೀಗಿದ್ದರೂ ಅಧ್ಯಯನ ಬಾಹ್ಯ ಮೌಲ್ಯಮಾಪನಕ್ಕೆ ಎದುರು ನೋಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ವಿವರಣೆಯನ್ನು ನೀಡಲಾಗಿಲ್ಲ.

ಅಮೆರಿಕದ ಹೋಮ್​ಲ್ಯಾಂಡ್​ ಸೆಕ್ಯುರಿಟಿ ಕಾರ್ಯದರ್ಶಿ ವಿಭಾಗದ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರರಾಗಿರುವ ವಿಲಿಯಂ ಬ್ರ್ಯಾನ್​ ಅವರು ಗುರುವಾರ ವೈಟ್​ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಟ್ರಾವೈಲೆಟ್​ ಕಿರಣಗಳು ವೈರಸ್​ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ಸರ್ಕಾರಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಹೀಗಾಗಿ ಬೇಸಿಗೆ ಕಾಲದಲ್ಲಿ ವೈರಸ್​ ಹರಡುವಿಕೆ ತುಂಬಾ ಕಡಿಮೆ ಇರಲಿದೆ ಎಂದು ತಿಳಿಸಿದರು.

ಭೂಮೇಲ್ಮೈ ಹಾಗೂ ಗಾಳಿಯಲ್ಲಿರುವ ವೈರಸ್​ ಅನ್ನು ಸೂರ್ಯನ ಬೆಳಕು ಕೊಲ್ಲುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಉಷ್ಣಾಂಶ ಮತ್ತು ಆರ್ದ್ರತೆ ಎರಡರಲ್ಲೂ ಒಂದೇ ಪ್ರಭಾವ ಇರುವುದನ್ನು ಪತ್ತೆ ಹಚ್ಚಿದ್ದೇವೆ. ಉಷ್ಣಾಂಶ ಮತ್ತು ಆರ್ದ್ರತೆಯಲ್ಲಿ ಯಾವುದೇ ಹೆಚ್ಚಾದರೂ ವೈರಸ್​ಗೆ ಅನುಕೂಲವಾಗಿರುವುದಿಲ್ಲ ಎಂದು ವಿಲಿಯಂ ಬ್ರ್ಯಾನ್​ ಹೇಳಿದ್ದಾರೆ.

ಅಧ್ಯಯನ ವರದಿಯನ್ನು ಸದ್ಯ ಪುನಾರವಲೋಕನಕ್ಕಾಗಿ ಬಿಡುಗಡೆ ಮಾಡಿಲ್ಲ. ಈ ವಿಧಾನ ಎಷ್ಟು ಬಲಿಷ್ಠವಾಗಿದೆ ಎಂದು ಹೇಳಲು ತಜ್ಞರಿಗೂ ಸಹ ತುಸು ಕಷ್ಟಕರವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಖಚಿತತೆಯೊಂದಿಗೆ ಅಧ್ಯಯನ ವರದಿ ಪ್ರಕಟವಾಗಲಿದೆ ಎಂದಿದ್ದಾರೆ.

ಅಲ್ಟ್ರಾವೈಲೆಟ್​ ಕಿರಣಗಳು ಉತ್ತಮ ಪ್ರಭಾವ ಬೀರುತ್ತದೆ ಎಂಬುದು ಹಿಂದಿನಿಂದಲೂ ತಿಳಿಸಿದೆ. ಏಕೆಂದರೆ ಅದರಲ್ಲಿರುವ ವಿಕಿರಣಗಳು ವೈರಸ್​ನಲ್ಲಿರುವ ಅನುವಂಶಿಕ ವಸ್ತು ಮತ್ತು ಪುನರಾವರ್ತಿಸುವ ಸಾಮರ್ಥ್ಯದ ಮೇಲೆ ಹಾನಿ ಮಾಡುತ್ತದೆ. ಆದರೆ, ಅಲ್ಟ್ರಾವೈಲೆಟ್​ನ ತೀವ್ರತೆ ಮತ್ತು ತರಂಗಾಂತರವನ್ನು ಯಾವ ಪ್ರಮಾಣದಲ್ಲಿ ಬಳಸಬೇಕೆಂಬುದರ ಮೇಲೆ ಪ್ರಯೋಗ ನಡೆಯುತ್ತಿದೆ. ಬೇಸಿಗೆಯಲ್ಲಿನ ನೈಸರ್ಗಿಕ ಕಿರಣಗಳೇ ಪ್ರಭಾವ ಬೀರಲಿದೆಯೇ ಎಂಬುದನ್ನು ನಿಖರವಾಗಿ ತಿಳಿಯುವ ಪ್ರಯತ್ನ ನಡೆಯುತ್ತಿದೆ ಎಂದರು. (ಏಜೆನ್ಸೀಸ್​)

ಡಬ್ಲ್ಯುಎಚ್​ಒ ಲೀಡ್​ ರೋಲ್​ ಮುಂದಿನ ತಿಂಗಳು ಭಾರತಕ್ಕೆ: COVID19 ಸೋಂಕಿನ ಅವಧಿಯಲ್ಲಿ ಮಹತ್ವದ ಹೊಣೆಗಾರಿಕೆ

Share This Article

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಲೇಬೇಕು..Papaya

Papaya: ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಪ್ರಯೋಜನಕಾರಿ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಪಪ್ಪಾಯಿ…