More

    ಹೆಚ್ಚುವರಿ ಬಸ್​ಗಾಗಿ ತೊಂಡೂರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

    ಸವಣೂರ: ಶಾಲೆ, ಕಾಲೇಜ್ ಅವಧಿಯೊಳಗೆ ಹೆಚ್ಚುವರಿ ಬಸ್ ಬಿಡಲು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ಬಸ್ ತಡೆದು ಪ್ರತಿಭಟನೆ ಕೈಗೊಂಡ ಘಟನೆ ತಾಲೂಕಿನ ತೊಂಡೂರ ಗ್ರಾಮದಲ್ಲಿ ನಡೆದಿದೆ.

    ಬೆಳಗ್ಗೆ 9 ಗಂಟೆಗೆ ಹುರಳಿಕುಪ್ಪಿ, ತೊಂಡೂರ, ಹೊಸಳ್ಳಿ ಮೂಲಕ ಸವಣೂರಿಗೆ ಬರುವ ಬಸ್​ನಲ್ಲಿ ವಿದ್ಯಾರ್ಥಿಗಳು ಸಂಚರಿಸಲು ಜಾಗ ಇಲ್ಲದಂತಾಗಿದೆ.

    ಪ್ರಯಾಣಿಕರ ಸಮಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆಗೆ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಬಿಡಲು ಆಗ್ರಹಿಸಿ ಪಟ್ಟು ಹಿಡಿದ ಪ್ರತಿಭಟನಾಕಾರರು ಹೆಚ್ಚುವರಿ ಬಸ್ ಬಿಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ನಿಂಗಪ್ಪ ಡವಗಿ, ಸವಣೂರ ಬಸ್ ಘಟಕ ವ್ಯವಸ್ಥಾಪಕರೊಂದಿಗೆ ಪೋನ್ ಮೂಲಕ ಸ್ಥಳೀಯ ಪರಿಸ್ಥಿತಿ ಹಾಗೂ ಪ್ರತಿಭಟನೆಯ ವಿವರ ತಿಳಿಸಿ ಸ್ಥಳಕ್ಕೆ ಆಗಮಿಸಬೇಕು ಅಥವಾ ತಪ್ಪಿದಲ್ಲಿ ಹೆಚ್ಚುವರಿ ಬಸ್ ನಿತ್ಯ ಬಿಡಲು ಕೋರಿಕೆ ಸಲ್ಲಿಸಿದರು.

    ಘಟಕ ವ್ಯವಸ್ಥಾಪಕ ಶೇಖರ ನಾಯಕ, ಹೆಚ್ಚುವರಿ ಬಸ್ ಬಿಡಲು ಒಪ್ಪಿಗೆ ಸೂಚಿಸಿ ತಕ್ಷಣವೇ ಬಸ್ ವ್ಯವಸ್ಥೆ ಮಾಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

    ಪ್ರಮುಖರಾದ ಸತೀಶ ದೇವಸೂರ, ಚನ್ನಪ್ಪ ಮರಡೂರ, ನಿಂಗಪ್ಪ ಮತ್ತೂರ, ಶಿವಾನಂದ ಚಂದ್ರಾಪಟ್ಟಣ, ಶಿವಪ್ಪ ಅಂಗಡಿ, ಶಂಕ್ರವ್ವ ತಿಮ್ಮೆನಹಳ್ಳಿ, ವಿದ್ಯಾರ್ಥಿಗಳು, ರೈತ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts