More

    ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪರಿಗಣಿಸಿ ಪಾಠ ಮಾಡಿ, ಶಿಕ್ಷಕರಿಗೆ ಜಿಪಂ ಸಿಇಒ ಕೆ.ನಿತೀಶ್ ಸಲಹೆ

    ಬಳ್ಳಾರಿ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಸ್ಸೆಸ್ಸೆಲ್ಸಿ ಮುಖ್ಯ ಘಟ್ಟ. ಹೀಗಾಗಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಮನೆಯ ಮಕ್ಕಳಂತೆ ಪರಿಗಣಿಸಿ ಕಲಿಕೆಗೆ ನೆರವಾಗಬೇಕು ಎಂದು ಜಿಪಂ ಸಿಇಒ ಕೆ.ನಿತೀಶ್ ಸಲಹೆ ನೀಡಿದರು.

    ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬಳ್ಳಾರಿ ಮತ್ತು ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕ ಮಂಗಳವಾರ ಪ್ರೌಢಶಾಲೆ ಮುಖ್ಯಶಿಕ್ಷಕ, ಶಿಕ್ಷಕರಿಗೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    8ನೇ ತರಗತಿಯ ಗಣಿತ ವಿಷಯದಲ್ಲಿ ಫೇಲಾಗಿದ್ದೆ. ಅಂದು ಫೇಲಾದ ನನ್ನನ್ನೇ ಐಎಎಸ್ ಅಧಿಕಾರಿಯನ್ನಾಗಿ ರೂಪಿಸಿದ ಕೀರ್ತಿ ಶಿಕ್ಷಕ ವರ್ಗಕ್ಕೆ ಸಲ್ಲುತ್ತದೆ. 10ನೇ ತರಗತಿಯಲ್ಲಿ ಉತ್ತಮ ಗಣಿತ ಶಿಕ್ಷಕರು ಸಿಕ್ಕಿದ್ದರಿಂದ ಶೇ.99 ಅಂಕ ತೆಗೆದುಕೊಂಡೆ. ಅದಾದ ಬಳಿಕ ಪಿಯುಸಿಯಲ್ಲಿ ಗಣಿತದಲ್ಲಿ ಶೇ.100 ಅಂಕ ಪಡೆದೆ. ನಂತರ ಇಂಜಿನಿಯರಿಂಗ್ ಹಾಗೂ ಐಎಎಸ್ ಹಂತದಲ್ಲಿ ಉತ್ತಮ ಅಂಕ ಪಡೆಯಲು ಎಸ್ಸೆಸ್ಸೆಲ್ಸಿ ಹಂತದ ಶಿಕ್ಷಣವೇ ನನಗೆ ಭದ್ರ ನೆಲೆ ಒದಗಿಸಿತು ಎಂದು ತಮ್ಮ ವಿದ್ಯಾರ್ಥಿ ಜೀವನ ಮೆಲುಕು ಹಾಕಿದರು.

    ಶಿಕ್ಷಕರು ಸರಿಯಾಗಿ ಪಾಠ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಉನ್ನತ ಸ್ಥಾನ ಅಲಂಕರಿಸಿದ ಬಳಿಕ ಅವರು ನಿಮ್ಮನ್ನು ನಿತ್ಯ ಸ್ಮರಿಸುತ್ತಾರೆ. ಶಿಕ್ಷಕರಿಗೆ ಪ್ರತಿ ವರ್ಷ 10ನೇ ಕ್ಲಾಸ್ ಬರುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಒಂದೇ ಬಾರಿ ಬರುವುದರಿಂದ ಸಕಲ ರೀತಿಯಲ್ಲಿ ನೆರವಾಗಬೇಕು ಎಂದರು. ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಮಾನಸಿಕ ತಜ್ಞ ಟಿ.ಆರ್.ಶ್ರೀನಿವಾಸ, ಡಯಟ್ ಪ್ರಾಚಾರ್ಯ ರಾಯಪ್ಪ ರೆಡ್ಡಿ, ಬಿಇಒಗಳಾದ ವೀರಭದ್ರಯ್ಯ, ಐ.ಆರ್.ಅಕ್ಕಿ, ಎಲ್.ಡಿ.ಜೋಷಿ, ಜಿಲ್ಲೆಯ ವಿವಿಧ ಶಾಲೆಯ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts