ವಿಜಯವಾಣಿ ಸುದ್ದಿಜಾಲ ಗದಗ
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ಸರ್ಕಾರ ಸಕಾರಾತ್ಮಕ ಚಿಂತನೆ ನಡೆಸಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಗಲಿದ್ದು, ಕೊನೆಪಕ್ಷ 2020 ರ ವರೆಗೆ ನಿವೃತ್ತಿ ಆದ ಹುದ್ದೆ ನೇಮಕಾತಿ ಸರ್ಕಾರದಿಂದ ಭರವಸೆ ನಿಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ರಾಜ್ಯ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015 ರಿಂದ 2023 ರ ವರೆಗೆ ನಿವೃತ್ತಿಯಾದ 8000 ಖಾಲಿ ಹುದ್ದೆಗಳ ನೇಮಕಾತಿ ಮಾಡಬೇಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. 2020ರ ವರೆಗೆ ಖಾಲಿ ಆಗಿರುವ ಹುದ್ದೆಗಳ ಭತಿರ್ಗೆ ಅನುಮತಿ ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.
ಮುಂದಿನ ಆಥಿರ್ಕ ವರ್ಷದಲ್ಲಿ 500 ರಿಂದ 600 ಶಾಲೆಗಳಲ್ಲಿ ಪಬ್ಲಿಕ್ ಶಾಲಾ ವ್ಯವಸ್ಥೆ ಜಾರಿ ಆಗಲಿದೆ. 2800 ಕೋಟಿ ಅನುದಾನ ಒದಗಿಸುವ ಗುರಿ ಹೊಂದಲಾಗಿದೆ. ಕೈಗಾರಿಕೆ, ಇತರೆ ಸಂಸ್ಥೆಗಳ ಸಿಎಸ್ಆರ್(ಸಾಮಾಜಿಕ ಅಭಿವೃದ್ಧಿ) ಅನುದಾನವನ್ನು ಸಂರ್ಪೂಣ ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಸರ್ಕಾರ ತಿರ್ಮಾನಿಸಿದೆ ಎಂದು ಸಚಿವರು ಹೇಳಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಅನುದಾನ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊರತೆ ಆದರೆ, ಉತ್ತರ ಕರ್ನಾಟಕ ಶೈಕ್ಷಣಿಕ ವ್ಯವಸ್ಥೆ ಕುಸಿಯುತ್ತದೆ. ಅನುದಾನ ಕೊರತೆ ಆಗುವಂತಹ ಯಾವುದೇ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗದುಕೊಳ್ಳಬಾರದು. ಆಥಿರ್ಕ ಕಷ್ಟಗಳನ್ನು ನೀಗಿಸಿ, ಸವಾಲು ಎದುರಿಸಿ ಸಚಿವ ಮುಧು ಬಂಗಾರಪ್ಪ ಅವರು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಸ್ತುತವಾಗಿ ಶಿಕ್ಷಕರ ನೇಮಕಾತಿ ಗೊಂದಲ, ಪಿಂಚಣಿ ವಿಷಯ, ಅನುದಾನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಶಿಕ್ಷಣ ಇಲಾಖೆ ಎದುರಿಸುತ್ತಿದೆ. ಕ್ಲಿಷ್ಟ ಸಮಸ್ಯೆಗಳನ್ನು ಸರಳವಾಗಿ ಶಿಕ್ಷಣ ಸಚಿವರು ನಿಭಾಯಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ, ಸಂಕನೂರು ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸವಾಲುಗಳ ಬಗ್ಗೆ ವಿಸತವಾಗಿ ಮಾತಮಾಡಿ ಸಚಿವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ, ಉಷಾ ದಾಸರ, ಸುನಂದಾ ಬಾಕಳೆ, ಕೃಷ್ಣಪ್ಪ ಇ, ಇತರರು ಇದ್ದರು
ನೂತನ ಯೋಜನೆಗಳು:
ಶಿಕ್ಷಣ ಇಲಾಖೆಯಲ್ಲಿ ಜಾರಿ ಆಗಲಿರುವ ನೂತನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಮಧು ಬಂಗಾರಪ್ಪ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಥಳಿಯ ಸಂಸತಿ, ಸಂಪ್ರದಾಯ ಉತ್ತೇಜಿಸುವ ಪಠ್ಯಗಳನ್ನು ಕಲಿಸಲಾಗುವುದು. ರಾಜ್ಯದ 60 ಲಕ್ಷ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ರಾಗಿ ಮಿಶ್ರಿತ ಹಾಲನ್ನು ಶಾಲೆಗಳಲ್ಲಿ ವಿತರಿಸುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಎಸ್.ವಿ. ಸಂಕನೂರು ಪ್ರಸ್ತಾಪಿಸಿದ ವಿಷಯಗಳು:
- * ಪದವಿ ಪೂರ್ವ ಹಂತದ ಮೇಲುಸ್ತುವಾರಿಯನ್ನು ಜಿಪಂ ಸಿಇಒ, ಅಪರ ಆಯುಕ್ತರಿಗೆ ನೀಡುವ ಸುತ್ತೋಲೆ ಸರ್ಕಾರ ಹೊರಡಿಸಿದೆ. ಇದರಿಂದ ಶಿಕ್ಷಕರಲ್ಲಿ ತಳಮಳ ಸೃಷ್ಟಿಯಾಗಿದೆ. ಸಿಇಓ ಮತ್ತು ಅಪರ ಆಯುಕ್ತರ ಕಾರ್ಯವ್ಯಾಪ್ತಿ ಏನು? ಈ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ಸುತ್ತೋಲೆ ಹಿಂಪಡೆಯಬೇಕು. ಈ ಬಗ್ಗೆ ವಿಸತ ಚರ್ಚೆ ನಡೆದ ನಂತರ ನಿರ್ಣಯ ಕೈಕೊಳ್ಳಬೇಕು.
- * ಪದವಿಪೂರ್ವ ವಿಭಾಗವನ್ನು ಶಾಲಾ ಶಿಕ್ಷಣಕ್ಕೆ ಒಳಪಡಿಸುವ ಕಾರ್ಯವು ನಡೆದಿದೆ. ಭವಿಷ್ಯದಲ್ಲಿ ಈ ಪ್ರಕ್ರಿಯೆಯಿಂದ ನಷ್ಟವೇ ಹೆಚ್ಚು.
- ಶಿಕ್ಷಣ ಇಲಾಖೆ ಹೆಸರನ್ನು “ಶಾಲಾ ಶಿಕ್ಷಣ’ ಎಂದು ಬದಲಾಯಿಸಬಾರದು.
- * ದ್ವೀತಿಯ ಪಿಯು ಪರೀಕ್ಷೆ ಪೂರ್ವದಲ್ಲಿ ಎರಡು&ಮೂರು ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಪಠ್ಯಕ್ರಮ ಮುಗಿಸಲು ಬೋಧನ ಅವಧಿ ಕಡಿಮೆ ಸಿಗುತ್ತಿದೆ. ಬರೀ ಪರೀಕ್ಷೆಗಳಿಂದಲೇ ದ್ವೀತಿಯ ಪಿಯು ಮುಗಿಯುತ್ತದೆ. ಇದರ ಜತೆ ಶೈಕ್ಷಣಿಕ, ಸಾಂಸತಿಕ ಚಟುವಟಿಕೆಗಳೂ ನಡೆಸಬೇಕು. ಹೀಗಾಗಿ ಪಠ್ಯಕ್ರಮ ಮುಗಿಸಲು ಸಾಧ್ಯವಾಗುತ್ತಿಲ್ಲ.
- * ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡಲು ಪೂರ್ಣಾವಧಿ ಶಿಕ್ಷಕರ ಅಗತ್ಯವಿದೆ. ಶಿಕ್ಷಕರ ನೇಮಕ ಮಾಡಲು ಸರ್ಕಾರ ಅನುಮತಿ ನೀಡಬೇಕು.
- * 120 ವಿದ್ಯಾಥಿರ್ಗಳಿಗೆ ಒಬ್ಬ ದೈಹಿಕ ಶಿಕ್ಷಕ ನೇಮಕ ನಿಯಮ ಬದಲಾಯಿಸಿ 500 ವಿದ್ಯಾಥಿರ್ಗಳಿಗೆ ಒಬ್ಬ ದೈಹಿಕ ಶಿಕ್ಷಕ ನೇಮಕ ಆದೇಶ ಮಾಡಿದ ಆಥಿರ್ಕ ಇಲಾಖೆ ಆದೇಶ ಹಿಂಪಡೆಯಬೇಕು.
ಮಧು ಬಂಗಾರಪ್ಪ ಸ್ಪಷ್ಟನೆ:
- * ಶಾಲೆಗಳ ಮೇಲುಸ್ತುವಾರಿಗೆ ಎಸ್ಡಿಎಂಸಿ ಇರುವಂತೆ ಇಲಾಖೆ ಮೇಲುಸ್ತುವಾರಿಗೆ ಸಮಿತಿ ಅವಶ್ಯವಿದೆ. ಈ ಈ ಹಿನ್ನೆಲೆ ಆಡಳಿತ ನಿರ್ವಹಣೆಯನ್ನು ಮಾತ್ರ ಸಿಇಒ, ಉಪ ಕಾರ್ಯದರ್ಶಗಳಿಗೆ ವಹಿಸಲಾಗಿದೆ.
- * ಶಿಕ್ಷಣ ಇಲಾಖೆ ಹೆಸರನ್ನು ಶಾಲಾ ಶಿಕ್ಷಣ ಎಂದು ನಾಮಕರಣ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ.
- * ಮಕ್ಕಳ ಪೂರಕ ಪರೀಕ್ಷೆಗಳ ಪೇಲಾದ ಮಕ್ಕಳಿಗೆ ಪೂರಕ ಪರೀಕ್ಷೆ ಬೇಕು. ಮನೆಯಲ್ಲಿ ಇದ್ಸ ಮಕ್ಕಳು ತಪ್ಪು ಹಾದಿ ಹಿಡಿಯುತ್ತಾರೆ. ಅವರಿಂದ ಅಪರಾಧ ಪ್ರಕರಣಗಳು ನಡೆಯುತ್ತವೆ. ಅದಕ್ಕಾಗಿ ಪೂರಕ ಪರೀಕ್ಷೆ ಅಗತ್ಯವಿದೆ. ಎಲ್ಲರ ಸಹಕಾರ ಅಗತ್ಯವಿದೆ ಎಂದರು.
- * ಈ ವರ್ಷ ಸೆಪ್ಟೆಂಬರ್ ಅವಧಿ ವರೆಗೂ ಪರೀಗಳು ನಡೆದಿವೆ. ಇಲಾಖೆಯಿಂದ ನಿರ್ಧಾರ ತೆಗೆದುಕೊಳ್ಳುವುದು ತಡವಾಯಿತು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಶ್ರೀ ನಿರ್ಧಾರ ತೆಗೆದುಕೊಳ್ಳಲಿದೆ.
- * ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಪಿಂಚಣಿ ವಿಸ್ತರಿಸುವ ಚರ್ಚೆ ಪ್ರಣಾಳಿಕೆಯಲ್ಲಿದೆ.
ಕೋಟ್:
ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ನಾವು ಎಡವಿದ್ದೇವೆ. ಇಲಾಖೆ, ಶಿಕ್ಷಕರು ಮತ್ತು ಪಾಲಕರು ಈ ಅಪವಾದದ ಹೊಣೆ ಹೊರಬೇಕು.
ಮಧು ಬಂಗಾರಪ್ಪ, ಶಿಕ್ಷಣ ಸಚಿವ