More

    ಡಿ.3ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ

    ಶಿವಮೊಗ್ಗ: ಕರೆಯಾಳಹಳ್ಳಿ ಬಸವನಗೌಡ ಜಯಮ್ಮ(ಕೆಬಿಜೆ) ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದಾವಣಗೆರೆಯಲ್ಲಿ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಹಾಗೂ ತಾರೆ ನೀ ಮಿನುಗು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್ 3ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಕೆ.ಸಿ.ಮೇಘಾ ತಿಳಿಸಿದರು.

    ಕೆಬಿಜೆ ಸಂಸ್ಥೆಯು 9 ವರ್ಷಗಳಿಂದ ಶಿಕ್ಷಣ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮುಂತಾದ ಸಾಮಾಜಿಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಮುಂದುವರಿದ ಭಾಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಜನರಿಗೆ ತಾರೆ ನೀ ಮಿನುಗು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವಿವಿಧ ಸಿನಿಮಾ ತಾರೆಯರು, ಹಿರಿಯರು, ರಾಜಕಾರಣಿಗಳು ಸೇರಿ ಹಲವು ಗಣ್ಯರು ಭಾಗವಹಿಸುವರು. ಈಗಾಗಲೇ ನಮ್ಮ ಆಯ್ಕೆ ಸಮಿತಿ ಹಲವರನ್ನು ಆಯ್ಕೆ ಮಾಡಿದೆ. ಸಮಿತಿಯು ಸಾಧಕರನ್ನು ಗುರುತಿಸಿ ಅವರ ಕ್ಷೇತ್ರಕ್ಕೆ ಹೋಗಿ ಅವರ ಸಾಧನೆಗಳನ್ನು ತಿಳಿದ ನಂತರವೇ ಪ್ರಶಸ್ತಿ ನೀಡಲಾಗುತ್ತದೆ ಎಂದರು.
    ಕೆಬಿಜೆ ಗ್ರಾಮೀಣ ಸಂಸ್ಥೆಯ ಪೂರಕ ಸಂಸ್ಥೆಯಾದ ಒಬಿಎಂ ಈವೆಂಟ್ಸ್ ದಾವಣಗೆರೆಯಿಂದ ಅಂದು ಸಂಜೆ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಆಯ್ಕೆ ಬಯಸಿ ಬಂದ ಪ್ರತಿಯೊಬ್ಬರಿಗೂ ಫ್ರೀ ಆಡಿಷನ್ ಇರುತ್ತದೆ. ಈ ಸ್ಪರ್ಧೆಯು ಐದು ವಿಭಾಗಳಲ್ಲಿ ನಡೆಯುತ್ತದೆ. ಒಂದೊಂದು ವಿಭಾಗದಿಂದ 15ರಿಂದ 20 ಸ್ಪರ್ಧಾಳುಗಳನ್ನು ಫಿನಾಲೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಭಾಗವಹಿಸಿದ 10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಫಿನಾಲೆಯಲ್ಲಿ ಆಯ್ಕೆಯಾದವರು ಟಿವಿ ಶೋ, ಧಾರಾವಾಹಿಗಳು ಹಾಗೂ ಚಲನಚಿತ್ರಗಳಲ್ಲೂ ಭಾಗವಹಿಸುವ ಅವಕಾಶವಿರುತ್ತದೆ ಎಂದರು. ಈ ಎರಡೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ದೂರವಾಣಿ(97397 48550)ಗೆ ಸಂಪರ್ಕಿಸಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts