More

    ಉಲ್ಟಾ ಹೊಡೆದ ಅಮೆರಿಕ; ಪಾಕಿಸ್ತಾನ ಅಣು ಬಾಂಬುಗಳನ್ನು ರಕ್ಷಿಸಿಕೊಳ್ಳಲು ಸಮರ್ಥ ಎಂದ ರಾಷ್ಟ್ರೀಯ ಇಲಾಖೆ!

    ವಾಷಿಂಗ್ಟನ್​: ‘ಸಮೃದ್ಧ ಪಾಕಿಸ್ತಾನದಲ್ಲಿ ಅಣು ಬಾಂಬುಗಳು ಸುರಕ್ಷಿತವಾಗಿ ಇರುತ್ತವೆ’ ಎಂದು ಅಮೆರಿಕದ ರಾಷ್ಟ್ರೀಯ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿಕೆ ನೀಡಿದ್ದಾರೆ.

    ಇತ್ತೀಚೆಗಷ್ಟೆ ಪಾಕಿಸ್ತಾನವನ್ನು ಜಗತ್ತಿನ ಅತ್ಯಂತ ಅಪಾಯಕಾರಿ ದೇಶ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಕರೆದಿದ್ದರು. ಆದರೆ ಈಗ ಅಧ್ಯಕ್ಷರ ಟೀಕೆಗೆ ವಿರುದ್ಧವಾಗಿ ಅಲ್ಲಿನ ರಾಷ್ಟ್ರೀಯ ಇಲಾಖೆ ಹೇಳಿಕೆ ನೀಡಿದೆ.

    ಜೋ ಬೈಡೆನ್​ರ ಹೇಳಿಕೆಗೆ ವಾಸ್ತವದಿಂದ ದೂರವಿದೆ. ಅಂತಾರಾಷ್ಟ್ರೀಯ ಪರಮಾಣು ಸಂಸ್ಥೆಯ ನಿರ್ದೇಶನಗಳಿಗೆ ಅನುಗುಣವಾಗಿ ನಮ್ಮ ಅಣು ಬಾಂಬುಗಳನ್ನು ಸಂರಕ್ಷಿಸಲಾಗುತ್ತಿದೆ’ ಎಂದು ಎಂದು ಪಾಕ್ ಪ್ರಧಾನಿ ಶೆಹಬಾಝ್ ಶರೀಫ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಅಮೆರಿಕ-ಪಾಕ್ ಸಂಬಂಧ ಹದಗೆಟ್ಟಿತ್ತು. ಈಗ ಬಂದಿರುವ ಹೇಳಿಕೆಯ ಉದ್ದೇಶ, ಅಮೆರಿಕ ಹಾಗೂ ಪಾಕಿಸ್ತಾನದ ಸಂಬಂಧವನ್ನು ಗಟ್ಟಿಗೊಳಿಸುವುದು ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts