More

    ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಖಂಡನೆ: ಕ್ರಮಕ್ಕೆ ರಾಜ್ಯ ರೈತ ಸಂಘದ ಕಾರ್ಯಕರ್ತರ ಆಗ್ರಹ

    ಶ್ರೀರಂಗಪಟ್ಟಣ: ರೈತರ ಸಾಲಮನ್ನಾ ಕುರಿತು ಸಂಸದ ತೇಜಸ್ವಿಸೂರ್ಯ ಅಸಂಬಂಧ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಿದರು. ರೈತ ಮುಖಂಡ ಮೇಳಾಪುರ ಸ್ವಾಮಿಗೌಡ ಮಾತನಾಡಿ, ತೇಜಸ್ವಿಸೂರ್ಯ ಚಾಕಲೇಟ್ ತಿಂದು ಬೆಳೆದ ಹುಡುಗ, ಅನ್ನ ತಿಂದು ಬೆಳೆಯದ ಆತನನ್ನು ಬೆಂಗಳೂರಿನ ಜನರು ಸಂಸದರನ್ನಾಗಿಸಿದ್ದಾರೆ. ಸರ್ಕಾರ, ಆಡಳಿತ, ಕೃಷಿ, ರೈತರ ಮಹತ್ವವೇ ಅರಿಯದ ಆತನಿಗೆ ಸರಿಯಾಗಿ ತಿಳಿವಳಿಕೆ ಇಲ್ಲ. ಇಂತಹವರಿಗೆ ಬಿಜೆಪಿ ಸೂಕ್ತ ಅರಿವು ಮೂಡಿಸಬೇಕು ಎಂದು ಮೂದಲಿಸಿದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ದೇಶದ ಶ್ರೀಮಂತ ಉದ್ಯಮಿಗಳು ಬ್ಯಾಂಕುಗಳಿಂದ ಲಕ್ಷಾಂತರ ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿ ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಅಂತಹ ಲೂಟಿಕೋರರನ್ನು ಬಿಜೆಪಿ ಸರ್ಕಾರವೇ ರಕ್ಷಣೆ ಮಾಡುತ್ತಿದೆ. ಅಂಬಾನಿ, ಅದಾನಿ ಸೇರಿದಂತೆ ಗುಜರಾತ್ ಬಂಡವಾಳಶಾಹಿಗಳಿಗೆ ಕೇಂದ್ರ ಸರ್ಕಾರ ಪರೋಕ್ಷವಾಗಿ ಸಾಲ, ಸೌಲಭ್ಯ ಒದಗಿಸುತ್ತಿದೆ. ದೇಶದ 100 ಕೋಟಿ ಜನರಿಗೆ ಬೇಕಾಗುವ ಆಹಾರ ಉತ್ಪಾದನೆ ಮಾಡಿ, ಹವಾಮಾನ ವೈಪರೀತ್ಯದಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿರುವ ರೈತರ ಕಷ್ಟ ತೇಜಸ್ವಿ ಸೂರ್ಯಗೆ ಏನು ಗೊತ್ತು? ಕೂಡಲೇ ಕ್ಷಮೆಯಾಚಿಸದಿದ್ದರೆ ಬಿಜೆಪಿ ಮಂತ್ರಿಗಳು, ಸಂಸದರಿಗೆ ಕಂಡಲ್ಲಿ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
    ರೈತ ಸಂಘದ ಮುಖಂಡರಾದ ಜಯರಾಮೇಗೌಡ, ಕೂಡಲಕುಪ್ಪೆ ತಮ್ಮಣ್ಣ, ಕಡತನಾಳು ಬಾಲಕೃಷ್ಣ, ಮಹದೇವಪುರ ಕೇಶವಾಚಾರಿ, ಕೂಡಲಕುಪ್ಪೆ ಶಶಿಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts