More

    ಶೃಂಗೇರಿಯಲ್ಲಿ ತುಂಗಾ ಪುಷ್ಕರ, ನದಿಗೆ ದೀಪಗಳ ಬಾಗಿನ

    ಶೃಂಗೇರಿ: ಶ್ರೀ ಶಾರದಾ ಮಠದಲ್ಲಿ ತುಂಗಾ ಪುಷ್ಕರದ ಸಲುವಾಗಿ ಶನಿವಾರ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನಡೆದ ಬಳಿಕ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ಬಳಿಕ ಶ್ರೀ ಶಾರದೆ, ಶ್ರೀ ಶಂಕರಭಗವತ್ಪಾದರ ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

    ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾರುದ್ರ ಪುರಶ್ಚರಣೆ ಧಾರ್ವಿುಕ ವಿಧಿವಿಧಾನಗಳನ್ನು ಶ್ರೀ ಮಠದ ಋತ್ವಿಜರು ನೆರವೇರಿಸಿದರು. ರಾತ್ರಿ ಶ್ರೀ ಕೋದಂಡರಾಮ ಸ್ವಾಮಿ ತೆಪ್ಪೋತ್ಸವ ನೆರವೇರಿತು. ವಿವಿಧ ಪುಷ್ಪ್ಪಳಿಂದ ಸಾಲಂಕೃತಗೊಂಡ ಸ್ವಾಮಿಗೆ ವಿಶೇಷ ಪೂಜೆಯನ್ನು ಯತಿಗಳು ಸಲ್ಲಿಸಿದರು. ತೆಪ್ಪೋತ್ಸವ ಸಂದರ್ಭದಲ್ಲಿ ಶ್ರೀಮಠದ ಪುರೋಹಿತರು ತುಂಗಾರತಿ ಬೆಳಗಿದರು. ತಾಲೂಕಿನ ಭಕ್ತರು ತೆಪ್ಪೋತ್ಸವದಲ್ಲಿ ತುಂಗೆಗೆ ದೀಪಗಳ ಬಾಗಿನ ಸಮರ್ಪಿಸಿದರು.

    ಮಠದಲ್ಲಿ ಶ್ರೀ ವಿದ್ಯಾಶಂಕರ ಆರಾಧನೆ ನೆರವೇರಿಸಲಾಯಿತು. ಹಿರಿಯ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಶ್ರೀ ವಿದ್ಯಾಶಂಕರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.

    ಶ್ರೀ ಶಾರದಾ ದೇವಾಲಯದ ಎಡಭಾಗದಲ್ಲಿ ಶ್ರೀ ಕೋದಂಡಸ್ವಾಮಿ ದೇವಾಲಯವಿದೆ. ಸೀತಾ-ಲಕ್ಷ್ಮ್ಮ-ಆಂಜನೇಯ ಸಹಿತನಾದ ಸ್ವಾಮಿಗೆ ಪ್ರತಿ ತಿಂಗಳ ಪುನರ್ವಸು ನಕ್ಷತ್ರದಂದು ಸಹಸ್ರ ತುಳಸಿ ಅರ್ಚನೆ ನೆರವೇರುತ್ತದೆ. ವಸಂತ ನವರಾತ್ರಿ ಹಾಗೂ ರಾಮನವಮಿ ತನಕ ಪ್ರತಿದಿನವೂ ಕಲ್ಪೋಕ್ತ ಪೂಜೆ, ಶ್ರೀಮದ್​ರಾಮಾಯಣ ಪಾರಾಯಣ, ರಾತ್ರಿ ಅಷ್ಟಾವಧಾನ ಸೇವೆ ಇತ್ಯಾದಿ ಧಾರ್ವಿುಕ ವಿಧಿಗಳನ್ನು ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts