More

    ಶ್ರೀಶಂಕರ ಸ್ತೋತ್ರ ವೈಭವ

    ಶೃಂಗೇರಿ: ಶಾರದಾ ಪೀಠದ ಆವರಣದಲ್ಲಿ ಶ್ರೀಮಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಶ್ರೀ ಶಂಕರ ಸ್ತೋತ್ರ ವೈಭವ ಕಾರ್ಯಕ್ರಮದಲ್ಲಿ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿಯ ಸುಮಾರು 3,500ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತೋಟಕಾಷ್ಟಕ ಮತ್ತು ಶ್ರೀ ಶಂಕರಭಗವತ್ಪಾದಾಚಾರ್ಯಸ್ತವ ಸ್ತೋತ್ರಗಳನ್ನು ಪಠಿಸಿದರು.
    ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ 50 ಸಾವಿರ ಗಿಡಗಳನ್ನು ನೀಡಲಾಗಿದ್ದು ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಸಾಂಕೇತಿಕವಾಗಿ ನಾಲ್ಕು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿದರು.
    ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾತನಾಡಿ, ಗಿರಿ ಎಂಬ ಶಿಷ್ಯ ಗುರು ಶ್ರೀಶಂಕರಾಚಾರ್ಯ ಅವರ ಮೇಲಿಟ್ಟ ಶ್ರದ್ಧಾಭಕ್ತಿಯಿಂದ ಅವರು ತೋಟಕಾಷ್ಟಕ ಸ್ತೋತ್ರಗಳನ್ನು ರಚಿಸಿ ಶ್ರೀ ಭಗವತ್ಪಾದರ ಪ್ರಧಾನ ಶಿಷ್ಯರಾಗಿ ತೋಟಕಾಷ್ಟಕಾಚಾರ್ಯರಾಗಿ ನೇಮಕಗೊಂಡರು. ಇದು ಪವಿತ್ರ ಶೃಂಗೇರಿಯಲ್ಲಿ ನಡೆದ ಅತ್ಯಂತ ಪ್ರಮುಖ ಘಟನೆ ಎಂದರು.
    ಕೃಷಿಗೆ ಉತ್ತಮವಾದ ಭೂಮಿ ಸಿಕ್ಕಿದೆ. ಅದರಲ್ಲಿ ನಾವು ಉತ್ತಮವಾಗಿ ಕೃಷಿ ಮಾಡಿದಾಗ ಮಾತ್ರ ಒಳ್ಳೆಯ ಸಲು ದೊರಕುತ್ತದೆ. ನಮ್ಮ ಜೀವನ ಕೂಡ ಕೃಷಿ ಭ ೂಮಿ ಇದ್ದ ಹಾಗೆ. ಉತ್ತಮ ಸತ್ಕಾರ್ಯ ಮಾಡಿದ್ದರೆ ನಾವು ಸಾಧನೆ ಮಾಡಲು ಸುಲಲಿತವಾಗುತ್ತದೆ. ವಿದ್ಯಾರ್ಥಿಜೀವನದಲ್ಲಿ ಮಕ್ಕಳು ಉನ್ನತ ಸಾಧನೆ ಮಾಡಿ ಸಂಸ್ಕಾರ ಅಳವಡಿಸಿಕೊಂಡಲ್ಲಿ ಮಾತ್ರ ಜೀವನ ಸಾರ್ಥಕ್ಯವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts