More

    17ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ

    ಕಳಸ: ಹೊರನಾಡಿನ ಆದಿಶಕ್ಱಾತ್ಮಕ ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ಅ.17ರಿಂದ 29ರವರೆಗೆ ಶರನ್ನವರಾತ್ರಿ ಉತ್ಸವ ಸಹಿತ ಮಹಾಚಂಡಿಕಾ ಹೋಮ, ಪಟ್ಟಾಭಿಷೇಕೋತ್ಸವ ಜೀವ-ಭಾವ ಹಾಗೂ ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.

    ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಲಿವೆ. ಪ್ರತಿದಿನ ದೇವಿಗೆ ಒಂದೊಂದು ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಗುವುದು. 17ರಿಂದ ಶ್ರೀ ಪಂಚದುರ್ಗಾ, ಮಹಾಲಕ್ಷ್ಮೀ ಮೂಲಮಂತ್ರ, ಪುರುಷಸೂಕ್ತ, ಸರಸ್ವತಿ ಮೂಲಮಂತ್ರ ಹೋಮ ಮತ್ತು ಶಾರದಾ ಪೂಜೆ, ಶ್ರೀ ಲಲಿತಾ ಮೂಲಮಂತ್ರ, ಶ್ರೀ ವಾಗೀಶ್ವರಿ ಮೂಲಮಂತ್ರ, ಶ್ರೀ ದುರ್ಗಾ ಮೂಲಮಂತ್ರ, ಶ್ರೀ ಚಂಡಿಕಾ ಮೂಲಮಂತ್ರ ಹೋಮ ನೆರವೇರಲಿವೆ. ಪ್ರತಿದಿನ ಸಂಜೆ 6ರಿಂದ 7ರವರೆಗೆ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    25ರಂದು ಆಯುಧ ಪೂಜೆ, 26ಕ್ಕೆ ವಿಜಯದಶಮಿ: 27ರಂದು ಉದ್ಭವ ಗಣಪತಿ ಮತ್ತು ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶ್ರೀ ಗಣಪತಿ ಅಥರ್ವ ಶೀರ್ಷ ಹೋಮ, ಪವಮಾನ ಅಭಿಷೇಕ, ಶ್ರೀ ರುದ್ರಹೋಮ 28ರಂದು ಅಭಿಷೇಕ ಸಹಿತ ವಿಶೇಷ ಪೂಜೆ, ಮಹಾಚಂಡಿಕಾ ಹೋಮ 29ಕ್ಕೆ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ ಮತ್ತು ಪಟ್ಟಾಭಿಷೇಕೋತ್ಸವ, ಸಂಜೆ ಜೀವ-ಭಾವ ಕಾರ್ಯಕ್ರಮದ ಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts