More

  ಡಾ.ಅಪ್ಪ ಸೇರಿ ಮೂವರಿಗೆ ಶ್ರೀ ಸಿದ್ಧ ತೋಟೇಂದ್ರ ಪ್ರಶಸ್ತಿ

  ನಾಲವಾರ (ಕಲಬುರಗಿ): ಶ್ರೀ ಕೋರಿಸಿದ್ಧೇಶ್ವರ ಮಠದಿಂದ ಕೊಡಮಾಡುವ ಶ್ರೀ ಸಿದ್ಧ ತೋಟೇಂದ್ರ ಪ್ರಶಸ್ತಿಗೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಅಧ್ಯಾತ್ಮ ಚಿಂತಕಿ ಡಾ.ವೀಣಾ ಬನ್ನಂಜೆ, ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಆಯ್ಕೆಯಾಗಿದ್ದಾರೆ ಎಂದು ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ತಿಳಿಸಿದ್ದಾರೆ.

  24ರಂದು ಶ್ರೀಮಠದಲ್ಲಿ ನಡೆಯುವ ಜಾತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು, ಸೊಲ್ಲಾಪುರ ಸಂಸದ ಶ್ರೀ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ, ಮಧ್ಯರಾತ್ರಿ ಭಕ್ತರಿಂದ ಹರಕೆಯ ತನಾರತಿ ಮಹೋತ್ಸವ ನಡೆಯಲಿದೆ. 25ರಂದು ಸಂಜೆ ಭವ್ಯ ರಥೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts