More

    ಭಾರತದ ಆಧ್ಯಾತ್ಮಿಕತೆಗೆ ವಿಶ್ವವನ್ನು ಸೆಳೆಯುವ ಶಕ್ತಿ ಇದೆ; ಆದಿಚುಂಚನಗಿರಿ ಶ್ರೀಗಳ ಅಭಿಮತ

    ಬೆಂಗಳೂರು: ಭಾರತದ ಆಧ್ಯಾತ್ಮಿಕತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವುದು ಕಷ್ಟವಲ್ಲ. ಈ ಕಾರಣದಿಂದಲೇ ಇಲ್ಲಿನ ಆಧ್ಯಾತ್ಮಿಕತೆ ಇಡೀ ವಿಶ್ವವನ್ನೇ ಸೆಳೆಯುತ್ತಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಥಿಂಕರ್ಸ್ ಫೋರಂ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಇನ್ ಕ್ವೆಸ್ಟ್ ಆಫ್ ಗುರು’ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

    ಅಮೆರಿಕ ಮೂಲದ ಲೇಖಕರೊಬ್ಬರು ಭಾರತಕ್ಕೆ ಬಂದು ಸನಾತನ ಧರ್ಮದ ಮೂಲವನ್ನು ಅರ್ಥಮಾಡಿಕೊಂಡು ಅದನ್ನು ‘ಇನ್ ಕ್ವೆಸ್ಟ್ ಆಫ್ ಗುರು’ (ಗುರುವಿನ ಅನ್ವೇಷಣೆಯಲ್ಲಿ) ಎಂಬ ಪುಸ್ತಕದ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯರಾದ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾದ ವಿಷಯ. ನಮ್ಮ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಭಾರತದ ಮೌಲ್ಯಗಳ ಮೂಲಕ ಜಾಗತಿಕ ಶಾಂತಿಯನ್ನು ಬೆಳೆಸಲು ಭಾರತೀಯರು ಏನು ಮಾಡುತ್ತಿದ್ದೇವೆ? ಎಂಬ ಆತ್ಮಾವಲೋಕ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಆನಂದ ಮ್ಯಾಥ್ಯೂಸ್‌ರವರು ಈ ಕೃತಿಯ ಮೂಲಕ ಭಾರತದ ಆಧ್ಯಾತ್ಮಿಕ ಅನ್ವೇಷಕರಿಗೆ ಸರಳೀಕೃತ ವೈದಿಕ ಮಾರ್ಗದರ್ಶನವನ್ನು ಒದಗಿಸಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಮಾರಂಭದಲ್ಲಿ ಚಿಂತಕರಾದ ಕರ್ನಲ್ ಅಶೋಕ್ ಕಿಣಿ, ಯೋಗಗುರು ಪದ್ಮಶ್ರೀ ಡಾ.ಎಚ್.ಆರ್ ನಾಗೇಂದ್ರ, ಮೇಜರ್ ಜನರಲ್ ಡಾ. ಜಿ.ಡಿ.ಬಕ್ಷಿ, ನ್ಯಾಯಮೂರ್ತಿ ಪಿ.ಕೃಷ್ಣ ಭಟ್, ಲೆಫ್ಟಿನೆಂಟ್ ಜನರಲ್ ಎ.ನಟರಾಜನ್ ಇನ್ನಿತರರು ಪಾಲ್ಗೊಂಡಿದ್ದರು.

    “ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ ಯೋಗವಿಧ್ಯೆ. ನಮ್ಮ ಧರ್ಮಗ್ರಂಥಗಳು ಯೋಗದ ವ್ಯಾಖ್ಯಾನವನ್ನು ನೀಡಿವೆ. ಆನಂದ ಮ್ಯಾಥ್ಯೂಸ್ ಅವರು ಬರೆದ ‘ಇನ್ ಕ್ವೆಸ್ಟ್ ಆ್ ಗುರು’ ಪುಸ್ತಕವು ಯುವಕರಿಗೆ ಆಧ್ಯಾತ್ಮಿಕತೆ ಮತ್ತು ದೈವಿಕತೆಯನ್ನು ಅರ್ಥಮಾಡಿಕೊಳ್ಳಲು ಸರಳವಾಗಿ ಮಾರ್ಗದರ್ಶನ ಮಾಡುತ್ತದೆ” -ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ, ಯೋಗಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts