ಜಪಾನ್ನ ಸುಸಾಕಿ ಸರ್ವಾಧಿಕ 60 ಲಕ್ಷ ರೂ.ಗೆ ಹರಿಯಾಣ ಥಂಡರ್ಸ್ ತಂಡ ಸೇರಿದರು. ರಾರ್ಬಟ್ 55 ಲಕ್ಷ ರೂ.ಗೆ ಮಹಾರಾಷ್ಟ್ರ ಕೇಸರಿ ತಂಡದ ಪಾಲಾದರು. ಒಲಿಂಪಿಯನ್ ಅಂತಿಮ್ ಪಾಂಗಲ್ 52 ಲಕ್ಷ ರೂ.ಗೆ ಯುಪಿ ಡಾಮಿನೇಟರ್ಸ್ ತಂಡ ಸೇರಿ ಭಾರತದ ದುಬಾರಿ ಕುಸ್ತಿಪಟು ಎನಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಅಮನ್ ಸೆಹ್ರಾವತ್ 51 ಲಕ್ಷ ರೂ.ಗೆ ಟೈಗರ್ಸ್ ಆ್ ಮುಂಬೈ ದಂಗಲ್ಸ್ ತಂಡ ಕೂಡಿಕೊಂಡರು. ಸುಜೀತ್ ಕಲ್ಕಲ್ 52 ಲಕ್ಷ ರೂ.ಗೆ ಡೆಲ್ಲಿ ದಂಗಲ್ ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾದರು. ಪಿಡಬ್ಲ್ಯುಎಲ್ ಜ.15ರಿಂದ ಫೆ.1ರವರೆಗೆ ನಡೆಯಲಿದೆ.