

ರ್ಬಮಿಂಗ್ಹ್ಯಾಂ: ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ ವೃತ್ತಿ ಜೀವನದ 29ನೇ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಡಬ್ಲ್ಯುಬಿಎಲ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಗೆಲ್ಲುವ ಮೂಲಕ ಕರ್ನಾಟಕದ ಪಂಕಜ್ ಈ ಸಾಧನೆ ಮಾಡಿದ್ದಾರೆ. ಟೂರ್ನಿಯಲ್ಲಿ ಸೆಮಿಫೈನಲ್ಗೇರಿದ್ದ ಏಕೈಕ ಭಾರತೀಯ ಎನಿಸಿದ್ದ 41 ವರ್ಷದ ಪಂಕಜ್ ಆಡ್ವಾಣಿ ಐದು ಗಂಟೆ ನಡೆದ ಸುದೀರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ರಾಬ್ ಹಾಲ್ ವಿರುದ್ಧ 1,906-1,206 ಅಂತರದಿಂದ ಗೆಲುವು ಒಲಿಸಿಕೊಂಡರು. ಇದರೊಂದಿಗೆ 2014ರ ನಂತರ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಪ್ರಶಸ್ತಿ ಗೆದ್ದುಕೊಂಡ ಪಂಕಜ್, ಇದಕ್ಕೆ ಮುನ್ನ 2005, 2009, 2014ರಲ್ಲೂ ಈ ಸಾಧನೆ ಮಾಡಿದ್ದರು. ಮಹಿಳಾ ವಿಭಾಗದಲ್ಲಿ ಭಾರತದವರೇ ಆದ ಎಲ್. ಶೃತಿ ಸತತ ಮೂರನೇ ಬಾರಿಗೆ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದುಕೊಂಡರು.