

ಲಖನೌ: ಆತಿಥೇಯ ಭಾರತದ ಹಾಲಿ ಚಾಂಪಿಯನ್ ಡಬಲ್ಸ್ ಜೋಡಿಯಾದ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತನ್ವಿ ಶರ್ಮ ಮತ್ತು ಉನ್ನತಿ ಹೂಡಾ ಅವರು ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉಪಾಂತ್ಯಕ್ಕೇರಿದ್ದಾರೆ.
ಹ್ಯಾಟ್ರಿಕ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಶುಕ್ರವಾರ ಕ್ವಾರ್ಟರ್ಫೈನಲ್ ಆಡದೆ ವಾಕ್ಓವರ್ ಮೂಲಕ ಮುನ್ನಡೆದರು. ಅವರ ಎದುರಾಳಿಯಾದ ಫ್ರಾನ್ಸ್ನ ಮಾಗೋರ್ಟ್ ಲಂರ್ಬಟ್ ಮತ್ತು ಕ್ಯಾಮಿಲ್ಲೆ ಪೊಗ್ನಂಟೆ ಜೋಡಿ ಗಾಯದಿಂದಾಗಿ ಟೂರ್ನಿಯಿಂದ ಹಿಂದೆ ಸರಿಯಿತು.
ಮಹಿಳಾ ಸಿಂಗಲ್ಸ್ 8ರ ಘಟ್ಟದಲ್ಲಿ 2ನೇ ಶ್ರೇಯಾಂಕಿತೆ 17 ವರ್ಷದ ತನ್ವಿ ಶರ್ಮ ಇಂಡೋನೇಷ್ಯಾದ ನಿ ಕಡೆಕ್ ಧಿಂಡಾ ಅಮರ್ತ್ಯ ಪ್ರತಿವಿಗೆ 21-19, 18-21, 21-14ರಿಂದ ಸೋಲುಣಿಸಿದರೆ, 3ನೇ ಶ್ರೇಯಾಂಕಿತೆ ಉನ್ನತಿ ಹೂಡಾ ದೇಶಬಾಂಧವೆ ಅನ್ಮೋಲ್ ರ್ಖಬ್ ವಿರುದ್ಧ 21-19, 15-21, 21-18ರಿಂದ ಗೆದ್ದರು. ಸೆಮೀಸ್ನಲ್ಲಿ ತನ್ವಿ-ಉನ್ನತಿ ಮುಖಾಮುಖಿ ಆಗಲಿದ್ದು, ಭಾರತದ ಓರ್ವ ಆಟಗಾರ್ತಿ ಫೈನಲ್ಗೇರುವುದು ಖಚಿತಗೊಂಡಿದೆ. ಮಿಶ್ರ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ರೆಡ್ಡಿ ಕನಪುರಂ ಮತ್ತು ರೆಶಿಕಾ ಉದಯಸೂರ್ಯನ್ ಜೋಡಿ ಉಪಾಂತ್ಯಕ್ಕೇರಿದೆ.