

ನವದೆಹಲಿ: ಅತ್ಯುತ್ತಮ ಮಹಿಳಾ ಕ್ರೀಡಾ ಸಾಧಕರ (ಎಸ್ಒಎಂ) ಚುನಾವಣೆಯಲ್ಲಿ ಸೋತರೂ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಚುನಾವಣೆಗೆ ಐಸ್ ಹಾಕಿ ಸಂಸ್ಥೆ ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡಿದ್ದ ಹಾಲಿ ಅಧ್ಯೆ ಪಿ.ಟಿ. ಉಷಾ ಮರುಆಯ್ಕೆಯ ರೇಸ್ನಿಂದ ಹಿಂದೆ ಸರಿದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದ್ದ ಮಂಗಳವಾರ ಅವರು ನವದೆಹಲಿಯಲ್ಲಿರುವ ಐಒಎ ಭವನ್ನಲ್ಲಿರುವ ಚುನಾವಣಾಧಿಕಾರಿ ಕಚೇರಿಯ ಕಡೆ ಆಗಮಿಸಲಿಲ್ಲ. ಒಲಿಂಪಿಕ್ಸ್ ಪದಕ ವಿಜೇತ ಮಾಜಿ ಶೂಟರ್ ಹಾಗೂ ಐಒಎ ಹಾಲಿ ಉಪಾಧ್ಯಕ್ಷ ಗಗನ್ ನಾರಂಗ್ ಮತ್ತು ಭಾರತೀಯ ಆರ್ಚರಿ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಜೆಪಿ ನಾಯಕ ವೀರೇಂದ್ರ ಸಚ್ದೇವ್ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಇದರಿಂದ ಐಒಎ ಹೊಸ ಮುಖ್ಯಸ್ಥನ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಐಒಎ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸೋಮವಾರವೇ ನಾಮಪತ್ರ ಸಲ್ಲಿಸಿದ್ದರು.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸಿದ್ದ ಗಗನ್ ನಾರಂಗ್ ಸದ್ಯ ಅಧ್ಯಕ್ಷ ಪಟ್ಟಕ್ಕೆ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಸರ್ಕಾರದ ಬೆಂಬಲವೂ ಇದೆ ಎನ್ನಲಾಗಿರುವುದು ಇದಕ್ಕೆ ಪ್ರಮುಖ ಕಾರಣ. ಗುಜರಾತ್ನ ಅಹಮದಾಬಾದ್ನಲ್ಲಿ 2030ರ ಕಾಮನ್ವೆಲ್ತ್ ಗೇಮ್ಸ್ ನಿಗದಿಯಾಗಿರುವುದರಿಂದ ಮತ್ತು ಭಾರತ 2036ರ ಒಲಿಂಪಿಕ್ಸ್ ಆತಿಥ್ಯದ ರೇಸ್ನಲ್ಲಿರುವುದರಿಂದ ಈ ಬಾರಿಯ ಐಒಎ ಆಡಳಿತ ಮಂಡಳಿಗೆ ಮಹತ್ವದ ಜವಾಬ್ದಾರಿ ಎದುರಾಗಲಿದೆ.
2026ರಿಂದ 2030ರವರೆಗಿನ ಐಒಎ ಆಡಳಿತ ಮಂಡಳಿಯ (ಅಧ್ಯಕ್ಷ, ಹಿರಿಯ ಉಪಾಧ್ಯಕ್ಷ, 2 ಉಪಾಧ್ಯಕ್ಷ, ಖಜಾಂಚಿ, 2 ಜಂಟಿ ಕಾರ್ಯದರ್ಶಿ, 6 ಕಾರ್ಯಕಾರಿ ಮಂಡಳಿ ಸದಸ್ಯರು) ಆಯ್ಕೆಗೆ ಡಿಸೆಂಬರ್ 5ರಂದು ಚುನಾವಣೆ ನಿಗದಿಯಾಗಿದೆ. ಅದಕ್ಕೆ ಮುನ್ನ ನ.25ಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನ.29ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ.1ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಡಿ.2ಕ್ಕೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಡಿ.3ಕ್ಕೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಜತೆಗೆ ಒಬ್ಬರೇ ಆಕಾಂ ಕಣದಲ್ಲಿರುವ ಹುದ್ದೆಗಳಿಗೆ ಅವಿರೋಧ ಆಯ್ಕೆಯೂ ಖಚಿತವಾಗಲಿದೆ.
ಉಪಾಧ್ಯಕ್ಷ ಹುದ್ದೆಗೆ ಅಂಜು, ವಿಜೇಂದರ್ ಉಮೇದುವಾರಿಕೆ
ಮಾಜಿ ಲಾಂಗ್ಜಂಪ್ ಪಟು ಅಂಜು ಬಾಬಿ ಜಾರ್ಜ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಐಇಎ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್, ಮಾಜಿ ಬಿಲ್ಗಾರ್ತಿ ಡೋಲಾ ಬ್ಯಾನರ್ಜಿ ಕಾರ್ಯಕಾರಿ ಮಂಡಳಿ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಿದರು. ಸುನೈನಾ ಕುಮಾರಿ ಮಹಿಳಾ ಜಂಟಿ ಕಾರ್ಯದರ್ಶಿ ಮತ್ತು ಅಮಿತಾಭ್ ಶರ್ಮ ಪುರುಷ ಜಂಟಿ ಕಾರ್ಯದರ್ಶಿ ಸ್ಥಾನದ ರೇಸ್ನಲ್ಲಿದ್ದಾರೆ. ಮಾಜಿ ಟೇಬಲ್ ಟೆನಿಸ್ ಆಟಗಾರ ಕಮಲೇಶ್ ಮೆಹ್ತಾ ಖಜಾಂಚಿ ಸ್ಥಾನಕ್ಕೆ ಏಕಮಾತ್ರ ಆಕಾಂಯಾಗಿದ್ದಾರೆ.