ಡೇವಿಸ್ ಕಪ್ ಆಡದ ನಾಯಕನ ಸ್ಥಾನಕ್ಕೆ ಪೇಸ್, ಬೋಪಣ್ಣ ಆಕಾಂಕ್ಷಿ!

ಡೇವಿಸ್ ಕಪ್ ಭಾರತ ಟೆನಿಸ್ ತಂಡದ ಆಡದ ನಾಯಕನ ಸ್ಥಾನಕ್ಕೆ ಒಲಿಂಪಿಕ್ಸ್ ಪದಕ ವಿಜೇತ ಲಿಯಾಂಡರ್ ಪೇಸ್ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಹಾಲಿ ನಾಯಕ ಹಾಗೂ ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರೋಹಿತ್ ರಾಜ್‌ಪಾಲ್ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದೆ.
 ರೋಹನ್ ಬೋಪಣ್ಣ
ರೋಹನ್ ಬೋಪಣ್ಣ ಸಂಗ್ರಹ ಚಿತ್ರ
Published on: 

ನವದೆಹಲಿ: ಡೇವಿಸ್ ಕಪ್ ಭಾರತ ಟೆನಿಸ್ ತಂಡದ ಆಡದ ನಾಯಕನ ಸ್ಥಾನಕ್ಕೆ ಒಲಿಂಪಿಕ್ಸ್ ಪದಕ ವಿಜೇತ ಲಿಯಾಂಡರ್ ಪೇಸ್ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ. ಹಾಲಿ ನಾಯಕ ಹಾಗೂ ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರೋಹಿತ್ ರಾಜ್‌ಪಾಲ್ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದೆ.

ಎಐಟಿಎ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿರುವ ರೋಹಿತ್ ರಾಜ್‌ಪಾಲ್, ನಾಯಕನ ಹುದ್ದೆ ವಿಸ್ತರಣೆ ಅಥವಾ ಮರು ಆಯ್ಕೆ ಬಯಸಿಲ್ಲ ಎಂದು ಖಾತ್ರಿಪಡಿಸಿದ್ದಾರೆ. 53 ವರ್ಷದ ಲಿಯಾಂಡರ್ ಪೇಸ್, 1996ರ ಅಟ್ಲಾಂಟಾ ಒಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದು, ಸತತ ಏಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2021ರಲ್ಲಿ ನಿವೃತ್ತಿ ೋಷಿಸಿದ್ದಾರೆ. ಮಾಜಿ ವಿಶ್ವ ನಂ.1 ಡಬಲ್ಸ್ ಆಟಗಾರ ಹಾಗೂ ಕೊಡಗಿನ 45 ವರ್ಷದ ರೋಹನ್ ಬೋಪಣ್ಣ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ್ದರು.

ಭಾರತಕ್ಕೆ ತವರಲ್ಲಿ ಕೆನಡಾ ಸವಾಲು

ಇಟಲಿಯ ಬೊಲೊಗ್ನದಲ್ಲಿ ಭಾನುವಾರ ಡೇವಿಸ್ ಕಪ್ ಡ್ರಾ ಪ್ರಕಟಿಸಲಾಗಿದ್ದು, ಭಾರತ ತಂಡ ಡೇವಿಸ್ ಕಪ್ ಕ್ವಾಲಿೈಯರ್ಸ್‌ ಮೊದಲ ಸುತ್ತಿನ ತವರಿನ ಚರಣದಲ್ಲಿ ಕೆನಡಾ ಸವಾಲು ಎದುರಿಸಲಿದೆ. 2027ರ ೆಬ್ರವರಿ 5ರಿಂದ 7ರ ನಡುವೆ ಪಂದ್ಯ ನಡೆಯಲಿದ್ದು, ಆತಿಥೇಯ ತಾಣ ಇನ್ನಷ್ಟೇ ಅಂತಿಮವಾಗಬೇಕಿದೆ. ಭಾರತ-ಕೆನಡಾ ತಂಡಗಳು ಇದುವರೆಗೆ ಒಮ್ಮೆ ಮಾತ್ರ ಮುಖಾಮುಖಿ ಆಗಿದ್ದು, 2017ರಲ್ಲಿ ನಡೆದ ಪಂದ್ಯದಲ್ಲಿ ಭಾರತ 2-3 ಅಂತರದ ಸೋಲು ಕಂಡಿತ್ತು. ಕಳೆದ ಆವೃತ್ತಿಯಲ್ಲಿ ಭಾರತ ತಂಡ ಕ್ವಾಲಿೈಯರ್ಸ್‌ ಎರಡನೇ ಸುತ್ತಿನಲ್ಲಿ ದ.ಕೊರಿಯಾ ಎದುರು ಸೋತಿದ್ದರೆ, ಕೆನಡಾ ಕ್ವಾರ್ಟರ್‌ೈನಲ್‌ನಲ್ಲಿ ಜೆಕ್ ಗಣರಾಜ್ಯ ವಿರುದ್ಧ ಪರಾಭವಗೊಂಡಿತ್ತು.