ಏಷ್ಯನ್​ ಪ್ಯಾರಾ ಗೇಮ್ಸ್​ ಉದ್ಘಾಟನೆಗೆ ಮುನ್ನವೇ ಭಾರತಕ್ಕೆ ಪದಕ ಖಚಿತ!

ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಸೆಮೀಸ್​ಗೇರಿದ ಮಾನಸಿ-ತುಳಸಿಮತಿ ಜೋಡಿ
asian para games
ತುಳಸಿಮತಿ-ಮಾನಸಿ ಜೋಡಿಸಂಗ್ರಹ ಚಿತ್ರ
Published on: 

ಐಚಿ-ನಗೋಯಾ: ಏಷ್ಯನ್​ ಪ್ಯಾರಾ ಗೇಮ್ಸ್​ ಅಧಿಕೃತ ಆರಂಭಕ್ಕೆ ಮೊದಲೇ ಭಾರತಕ್ಕೆ ಪದಕವೊಂದು ಖಾತ್ರಿಯಾಗಿದೆ. ಪ್ಯಾರಾ ಬ್ಯಾಡ್ಮಿಂಟನ್​ ಸ್ಪರ್ಧೆಯ ಮಹಿಳೆಯರ ಡಬಲ್ಸ್​ ಎಸ್​ಎಲ್​3-ಎಸ್​ಯು5 ವಿಭಾಗದಲ್ಲಿ ಭಾರತದ ಮಾನಸಿ ಜೋಶಿ ಮತ್ತು ತುಳಸಿಮತಿ ಮುರುಗೇಶನ್​ ಜೊಡಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದೆ.

ಕಳೆದ ಆವೃತ್ತಿಯಲ್ಲಿ ರಜತ ಗೆದ್ದಿದ್ದ ಭಾರತದ ಜೋಡಿ ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಚೀನಾದ ಯುಮಿ ಲಿಯು-ಟೊಂಗ್​ಟಾಂಗ್​ ಲೀ ಜೋಡಿಯನ್ನು 21-10, 21-17ರಿಂದ ಮಣಿಸಿ, ಕೊನೇ ಲೀಗ್​ ಪಂದ್ಯಕ್ಕೆ ಮುನ್ನವೇ ಸೆಮೀಸ್​ ಪ್ರವೇಶ ಖಚಿತಪಡಿಸಿಕೊಂಡಿತು. ಈ ಸ್ಪರ್ಧೆಯಲ್ಲಿ ಸೆಮೀಸ್​ನಲ್ಲಿ ಸೋತವರಿಗೆ ಕಂಚು ಒಲಿಯಲಿದೆ.

ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶನಿವಾರ ಭಾರತದ ಇತರ ಸ್ಪರ್ಧಿಗಳು ಮಿಶ್ರ ಫಲ ಎದುರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net