ಕಬಡ್ಡಿ ತಾರೆ ಪವನ್​ ಸೆಹ್ರಾವತ್​ ವಿವಾಹ

kabaddi
ವೈವಾಹಿಕ ಜೀವನಕ್ಕೆ ಕಾಲಿಟ್ಟ ಪವನ್​ ಸೆಹ್ರಾವತ್​ಏಜೆನ್ಸಿ
Published on: 

ನವದೆಹಲಿ: ಭಾರತ ಕಬಡ್ಡಿ ತಂಡದ ಆಟಗಾರ ಪವನ್​ ಸೆಹ್ರಾವತ್​, ಹಿಮಾನಿ ಜತೆಗೆ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಉತ್ತರಾಖಂಡದಲ್ಲಿ ವಿವಾಹ ಸಮಾರಂಭ ನಡೆಯಿತು.

30 ವರ್ಷದ ಪವನ್​ ಸೆಹ್ರಾವತ್​, ಹಾಲಿ ವರ್ಷದ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದ ಭಾರತ ಕಬಡ್ಡಿ ತಂಡದ ಭಾಗವಾಗಿದ್ದರು. ಅವರು ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​, ಗುಜರಾತ್​ ಜೈಂಟ್ಸ್​, ತಮಿಳ್​ ತಲೈವಾಸ್​ ಮತ್ತು ತೆಲುಗು ಟೈಟಾನ್ಸ್​ ತಂಡಗಳ ಪರ ಆಡಿದ್ದಾರೆ.

kabaddi
ಕಬಡ್ಡಿ ಸ್ಟೈಲ್​ನಲ್ಲಿ ಪೋಸ್​ ನೀಡಿದ ನವದಂಪತಿಏಜೆನ್ಸಿ