ಹನುಮ ವಿಹಾರಿ ಅವರ ಪ್ರಕಾರ ಚೆನ್ನೈ ಫ್ರಾಂಚೈಸಿ, ಸಂಜು ಅವರನ್ನು ಆತನ ಕ್ರಿಕೆಟ್ ಪ್ರತಿಭೆಗಾಗಲಿ ಅಥವಾ ಆರ್ಥಿಕ ಕಾರಣಗಳಿಗಾಗಲಿ ಖರೀದಿಸಿಲ್ಲ. ದಕ್ಷಿಣ ಭಾರತದಲ್ಲಿ ಸಂಜುಗೆ ಅಪಾರ ಅಭಿಮಾನಿ ಬಳಗವಿದೆ. ಸಾಮಾನ್ಯ ಜನರು ಐಪಿಎಲ್‌ನಲ್ಲಿ ಕ್ರಿಕೆಟ್ ಮಾತ್ರ ಮುಖ್ಯ ಎಂದು ನೀವು ಭಾವಿಸುತ್ತಾರೆ. ಆದರೆ, ಐಪಿಎಲ್ ಮಾಲೀಕರು ಕ್ರಿಕೆಟ್‌ಗಿಂತ ಒಬ್ಬ ಆಟಗಾರನಿಗೆ ಎಷ್ಟು ಮಾರುಕಟ್ಟೆ ಮೌಲ್ಯವಿದೆ ಎಂಬುದನ್ನು ಯೋಚಿಸುತ್ತಾರೆ. ಸಂಜು ಎಲ್ಲೇ ಆಡಿದರೂ, ಕೇರಳ ಅಭಿಮಾನಿಗಳು ಸಂಜು ಅವರನ್ನು ಹುರಿದುಂಬಿಸುತ್ತಾರೆ. ಸಂಜು ಆಟ ನೋಡಲು ಬರುತ್ತಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಆಚರಿಸುತ್ತಾರೆ. ಹೀಗಾಗಿ, ತಮ್ಮ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಳ್ಳಲು ಸಂಜು ಅವರನ್ನು ಸಿಎಸ್ಕೆ ಖರೀದಿ ಮಾಡಿದೆ ಎಂದು ಹನುಮ ವಿಹಾರಿ ತಮ್ಮ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.