ASIAN GAMES: ಕಬಡ್ಡಿಯಲ್ಲಿ ಸೆಮೀಸ್​ ಪ್ರವೇಶಿಸಿದ ಭಾರತ; ಅವಳಿ ಪದಕ ಖಚಿತ!

ಉಪಾಂತ್ಯದಲ್ಲಿ ಪುರುಷರಿಗೆ ಥಾಯ್ಲೆಂಡ್​, ಮಹಿಳೆಯರಿಗೆ ನೇಪಾಳ ಎದುರಾಳಿ
asian games
ಭಾರತ ಮಹಿಳಾ ಕಬಡ್ಡಿ ಟೀಮ್​ಏಜೆನ್ಸಿ
Published on: 

ನಗೋಯಾ: ಹಾಲಿ ಚಾಂಪಿಯನ್​ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಏಷ್ಯಾಡ್ (ASIAN GAMES)​ ಕಬಡ್ಡಿ ಸ್ಪರ್ಧೆಯಲ್ಲಿ ಗುಂಪಿನ ಅಗ್ರಸ್ಥಾನದೊಂದಿಗೆ ಸೆಮಿಫೈನಲ್​ಗೇರಿದ್ದು, ಪದಕ ಖಚಿತಪಡಿಸಿಕೊಂಡಿವೆ.

ಭಾರತದ ಪುರುಷರ ತಂಡ ಗುರುವಾರ ನಡೆದ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಚೀನಾ ತೈಪೆ ವಿರುದ್ಧ 37&21 ಅಂಕಗಳಿಂದ ಗೆಲುವು ಸಾಧಿಸಿತು. ಭಾರತಕ್ಕೆ ಇದು ಸತತ 4ನೇ ಗೆಲುವಾಗಿದೆ. ಭಾರತದ ಪುರುಷರಿಗೆ ಸೆಮೀಸ್​ನಲ್ಲಿ ಥಾಯ್ಲೆಂಡ್​ ಸವಾಲು ಎದುರಾಗಲಿದೆ. 1990ರ ಏಷ್ಯಾಡ್​ಗೆ ಕಬಡ್ಡಿ ಸೇರ್ಪಡೆಗೊಂಡ ಬಳಿಕ 8 ಬಾರಿ ಚಿನ್ನ ಗೆದ್ದಿರುವ ಭಾರತ ಈ ಬಾರಿಯೂ ಪ್ರಾಬಲ್ಯ ಮುಂದುವರಿಸುವ ಹಂಬಲದಲ್ಲಿದೆ. ಬಿ ಗುಂಪಿನಲ್ಲಿದ್ದ ಪಾಕಿಸ್ತಾನ ತಂಡ 3ನೇ ಸ್ಥಾನಿಯಾಗಿ ಲೀಗ್​ ಹಂತದಲ್ಲೇ ಹೊರಬಿದ್ದಿತು.

ಭಾರತದ ಮಹಿಳಾ ತಂಡ ತನ್ನ 3ನೇ ಪಂದ್ಯದಲ್ಲಿ ಆತಿಥೇಯ ಜಪಾನ್​ ವಿರುದ್ಧ 50&25ರಿಂದ ಗೆಲುವು ಸಾಧಿಸಿತು. ಹ್ಯಾಟ್ರಿಕ್​ ಜಯದೊಂದಿಗೆ ಗುಂಪಿನ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಶುಕ್ರವಾರ ನಡೆಯಲಿರುವ ಸೆಮಿಫೈನಲ್​ನಲ್ಲಿ ನೇಪಾಳ ತಂಡದ ಸವಾಲು ಎದುರಾಗಲಿದೆ. ಕಬಡ್ಡಿಯಲ್ಲಿ ಸೆಮೀಸ್​ನಲ್ಲಿ ಸೋತ ಎರಡೂ ತಂಡಗಳಿಗೆ ಕಂಚಿನ ಪದಕ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net