

ನವ ದೆಹಲಿ: ಟೀಂ ಇಂಡಿಯಾದ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಟಿ-20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ. ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಐಪಿಎಲ್ನಲ್ಲಿ ತನ್ನ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಕದ ತಟ್ಟಿದ ಸೂರ್ಯ ಕುಮಾರ್ ಯಾದವ್, ಇಲ್ಲೀವರೆಗೆ ಅದ್ಭುತ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಸರಣಿ ಮುಗಿಯುತ್ತಿದ್ದಂತೆ ಸೂರ್ಯ ಕುಮಾರ್ ಯಾದವ್ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಇಲ್ಲೀವರೆಗೆ ಅನೇಕ ಭಾರತೀಯ ಆಟಗಾರರು ಟಿ-20 ಕ್ರಿಕೆಟ್ನಲ್ಲಿ ಅಬ್ಬರಿಸಿದ್ದಾರೆ. ತಮ್ಮ ಹೆಸರಿಗೆ ಹಲವು ದಾಖಲೆಗಳನ್ನು ಬರೆಸಿಕೊಂಡಿದ್ದಾರೆ. ಇದೀಗ ಸೂರ್ಯ ಕುಮಾರ್ ಯಾದವ್ ಈವರೆಗೆ ಯಾರೂ ಮಾಡದ ದಾಖಲೆಯೊಂದನ್ನ ಮಾಡಿದ್ದಾರೆ. ಅದು ಟಿ-20 ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ ಒಬ್ಬ 800 ಪ್ಲಸ್ ರನ್ ದಾಖಲಿಸಿರುವುದು.
ಹೌದು, ಸೂರ್ಯ ಕುಮಾರ್ ಯಾದವ್ ಟೀಂ ಇಂಡಿಯಾ ಪ್ರವೇಶಿಸುತ್ತಿದ್ದಂತೆ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿಯೇ ಬ್ಯಾಟ್ ಬೀಸಿದ್ದಾರೆ. ಈ ವರ್ಷ ಒಟ್ಟು 801 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗನೊಬ್ಬ ಒಂದು ವರ್ಷದಲ್ಲಿ ಸಿಡಿಸಿದ ಸರ್ವಾಧಿಕ ಮೊತ್ತವಾಗಿದೆ. ಜತೆಗೆ ಈ ವರ್ಷ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನೂ ಮಾಡಿದ್ದಾರೆ.
ಈ ವರೆಗೆ 34 ಪಂದ್ಯಗಳನ್ನು ಆಡಿರುವ ಸೂರ್ಯ ಕುಮಾರ್ ಯಾದವ್ ಟಿ-20 ಕ್ರಿಕೆಟ್ನಲ್ಲಿ 1045 ರನ್ ಕಲೆ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧ 117 ರನ್ ಸಿಡಿಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಒಂದು ಶತಕವನ್ನೂ ಸಿಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಕುಮಾರ್, ಐಸಿಸಿ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ನಲ್ಲಿ 538 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
India batter Suryakumar Yadav’s sensational run