ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಂಗಳೂರಿನ ಮೌರ್ಯ ಸಿ.ನಾಯ್ಕ್‌ಗೆ ಚಿನ್ನದ ಪದಕ

ನವೆಂಬರ್ 16 ರಿಂದ 18 ರವರೆಗೆ ಬೆಳಗಾವಿಯಲ್ಲಿ ನಡೆದ 2026-27ನೇ CBSE ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬೆಂಗಳೂರಿನ ಮೌರ್ಯ ಸಿ. ನಾಯ್ಕ್‌ 9 ವಯೋಮಿತಿ ಬಾಲಕರ ವಿಭಾಗದ ಸ್ಕೇಟಿಂಗ್‌ ಸ್ವರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿ1,000 ಮೀಟರ್ (5 ಸುತ್ತು) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೌರ್ಯ ಸಿ. ನಾಯ್ಕ್‌
ಮೌರ್ಯ ಸಿ. ನಾಯ್ಕ್‌
Published on: 

ಬೆಂಗಳೂರು: ನವೆಂಬರ್ 16 ರಿಂದ 18 ರವರೆಗೆ ಬೆಳಗಾವಿಯಲ್ಲಿ ನಡೆದ 2026-27ನೇ CBSE ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬೆಂಗಳೂರಿನ ಮೌರ್ಯ ಸಿ. ನಾಯ್ಕ್‌ 9 ವಯೋಮಿತಿ ಬಾಲಕರ ವಿಭಾಗದ ಸ್ಕೇಟಿಂಗ್‌ ಸ್ವರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿ1,000 ಮೀಟರ್ (5 ಸುತ್ತು) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್​​ನಲ್ಲಿ ಬೆಂಗಳೂರಿನ ಸಿಟಿ ಅರೇನಾದಲ್ಲಿ ನಡೆದ CBSE South Zone-II ಸ್ಕೇಟಿಂಗ್ ಚಾಂಪಿಯನ್‌ಶಿಪ್ 2026-27 ರಲ್ಲಿ 1,000 ಮೀಟರ್ (5 ಸುತ್ತು) ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಮೌರ್ಯ ಸಿ. ನಾಯ್ಕ್ ತನ್ನ 6ನೇ ವಯಸ್ಸಿನಿಂದಲೇ ಸ್ಕೇಟಿಂಗ್‌ ಅಭ್ಯಾಸ ಆರಂಭಿಸಿದ್ದು, ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ಸ್ಕೇಟರ್ಸ್‌ ಕ್ಲಬ್‌ನ ತರಬೇತುದಾರ ಶ್ರೀನಿವಾಸ್.ಜಿ.ಕೆ. ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.