ಫ್ರೆಂಚ್​ ಓಪನ್​: 4ರ ಘಟ್ಟಕ್ಕೆ ಸಿಂಧು, ಅಶ್ಮಿತಾಗೆ ನಿರಾಸೆ

ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಫ್ರೆಂಚ್​ ಓಪನ್ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ತನ್ನ ಅದ್ಭುತ ನಿರ್ವಹಣೆ ಮುಂದುವರಿಸಿದ್ದು, ಮಹಿಳಾ ಸಿಂಗಲ್ಸ್​ನಲ್ಲಿ ಸೆಮಿಫೈನಲ್​ಗೇರಿದ್ದಾರೆ.
ಸಿಂಧು
ಸಿಂಧು
Published on: 

ಪ್ಯಾರಿಸ್​: ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ಫ್ರೆಂಚ್​ ಓಪನ್ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ತನ್ನ ಅದ್ಭುತ ನಿರ್ವಹಣೆ ಮುಂದುವರಿಸಿದ್ದು, ಮಹಿಳಾ ಸಿಂಗಲ್ಸ್​ನಲ್ಲಿ ಸೆಮಿಫೈನಲ್​ಗೇರಿದ್ದಾರೆ. ಯುವ ತಾರೆ ಅಶ್ಮಿತಾ ಚಲಿಹಾ ಕ್ವಾರ್ಟರ್​ಫೈನಲ್​ನಲ್ಲಿ ನಿರಾಸೆ ಅನುಭವಿಸಿದರು.ಶುಕ್ರವಾರ ನಡೆದ ಎಂಟರಟ್ಟದ ಪಂದ್ಯದಲ್ಲಿ ವಿಶ್ವ ನಂ.11 ಪಿವಿ ಸಿಂಧು 21&13,21&14 ನೇರ ಗೇಮ್​ಗಳಿಂದ ಚೀನಾ ತೈಪೆಯ ಚಿಯು ಪಿನ್​ ಚಿಯಾನ್​ ವಿರುದ್ಧ 39 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು.

31 ವರ್ಷದ ಸಿಂಧು ಫ್ರೆಂಚ್​ ಓಪನ್ ಟೂರ್ನಿಯಲ್ಲಿ 2017, 2021ರ ಆವೃತ್ತಿಯ ನಂತರ ಅಂತಿಮ 4ರ ಟ್ಟಕ್ಕೇರಿದ್ದು, ಜಪಾನ್​ ಹಿನಾ ಅಕೇಚಿ ಎದುರು ಫೈನಲ್​ ಸ್ಥಾನಕ್ಕಾಗಿ ಸೆಣಸಲಿದ್ದಾರೆ.ಸಿಂಧು ಟೂರ್ನಿಯಲ್ಲಿ ಸವಾಲು ಜೀವಂತವಿರಿಸಿರುವ ಏಕೈಕ ಭಾರತೀಯ ಷಟ್ಲರ್​ ಆಗಿದ್ದಾರೆ. ಇನ್ನೊಂದು ಕ್ವಾರ್ಟರ್​ಫೈನಲ್​ನಲ್ಲಿ ಅಶ್ಮಿತಾ ಚಲಿಹಾ 10-21, 21-17, 16-21 ಮೂರು ಗೇಮ್​ಗಳ ಹೋರಾಟದಲ್ಲಿ ಜಪಾನ್​ನ ನೊಜೊಮಿ ಒಕುಹರಾ ಎದುರು ಪರಾಭವಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net