ಕಳೆದ 8 ವರ್ಷದಿಂದ ಒಂದೇ ಒಳಉಡುಪು ಬಳಸುತ್ತಿರುವ ಸ್ಟಾರ್​ ಫುಟ್​ಬಾಲರ್​: ನಿಮ್ಮ ಹುಬ್ಬೇರಿಸುವ ಕಾರಣ ಇಲ್ಲಿದೆ... Ederson

ಕಳೆದ 8 ವರ್ಷದಿಂದ ಒಂದೇ ಒಳಉಡುಪು ಬಳಸುತ್ತಿರುವ ಸ್ಟಾರ್​ ಫುಟ್​ಬಾಲರ್​:  ನಿಮ್ಮ ಹುಬ್ಬೇರಿಸುವ ಕಾರಣ ಇಲ್ಲಿದೆ... Ederson
ಕಳೆದ 8 ವರ್ಷದಿಂದ ಒಂದೇ ಒಳಉಡುಪು ಬಳಸುತ್ತಿರುವ ಸ್ಟಾರ್​ ಫುಟ್​ಬಾಲರ್​: ನಿಮ್ಮ ಹುಬ್ಬೇರಿಸುವ ಕಾರಣ ಇಲ್ಲಿದೆ... Ederson
Published on

ಪ್ರಮುಖ ಮುಖ್ಯಾಂಶಗಳು

  • ಮ್ಯಾಂಚೆಸ್ಟರ್ ಸಿಟಿ ಗೋಲ್‌ಕೀಪರ್ ಎಡರ್ಸನ್ ಕಳೆದ 8 ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಒಂದೇ ಒಳ ಉಡುಪು ಧರಿಸುತ್ತಾರೆ
  • ಇದು ತಮಗೆ ಅದೃಷ್ಟ ಮತ್ತು ಮಾನಸಿಕ ಸ್ಥೈರ್ಯ ತರುತ್ತದೆ ಎಂಬುದು ಎಡರ್ಸನ್​ ಅವರ ನಂಬಿಕೆಯಾಗಿದೆ
  • ಬಿಬಿಸಿ ಸಂದರ್ಶನದಲ್ಲಿ ಆ ಹಳೆಯ ಒಳ ಉಡುಪು ಈಗ ಸುಸ್ಥಿತಿಯಲ್ಲಿಲ್ಲ ಎಂದು ಅವರು ನಗುತ್ತಲೇ ಹೇಳಿದ್ದಾರೆ
  • ಈ ವಿಚಿತ್ರ ಹವ್ಯಾಸದ ನಡುವೆಯೇ ಎಡರ್ಸನ್ ಮ್ಯಾಂಚೆಸ್ಟರ್ ಸಿಟಿ ಪರ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ
Ederson : ಕ್ರೀಡಾಲೋಕದಲ್ಲಿ ಆಟಗಾರರು ತಮ್ಮದೇ ಆದ ವಿಶಿಷ್ಟ ನಂಬಿಕೆ ಅಥವಾ ಹವ್ಯಾಸಗಳನ್ನು ಹೊಂದಿರುವುದು ಸಾಮಾನ್ಯ. ಕೆಲವರು ಇದನ್ನು ಮೂಢನಂಬಿಕೆ ಎನ್ನಬಹುದು ಆದರೆ, ಆಟಗಾರರಿಗೆ ಅದೊಂದು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹದೇ ಒಂದು ವಿಚಿತ್ರ ಅಭ್ಯಾಸದ ಬಗ್ಗೆ ಮ್ಯಾಂಚೆಸ್ಟರ್ ಸಿಟಿ ತಂಡದ ಗೋಲ್‌ಕೀಪರ್ ಹಾಗೂ ಬ್ರೆಜಿಲಿಯನ್ ಫುಟ್‌ಬಾಲ್ ಆಟಗಾರ ಎಡರ್ಸನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ತಾವು ಆಡುವ ಪ್ರತಿ ಪಂದ್ಯದಲ್ಲೂ ಒಂದೇ ಜೋಡಿ ಒಳ ಉಡುಪನ್ನು (Boxer Shorts) ಧರಿಸುವ ವಿಲಕ್ಷಣ ಅಭ್ಯಾಸವನ್ನು ಅವರು ಹೊಂದಿದ್ದು, ಇದನ್ನು ಕಳೆದ ಹಲವು ಸಮಯದಿಂದ ಪಾಲಿಸುತ್ತಿದ್ದಾರೆ. ಹೊರಗಿನವರಿಗೆ ಇದು ವಿಚಿತ್ರವೆನಿಸಿದರೂ, ಆಟಗಾರರಿಗೆ ಇಂತಹ ನಂಬಿಕೆಗಳು ಮಾನಸಿಕ ಸ್ಥೈರ್ಯ ನೀಡುವುದರಿಂದ ಅವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎಡರ್ಸನ್​ ತಿಳಿಸಿದ್ದಾರೆ.
2017ರಲ್ಲಿ ಮ್ಯಾಂಚೆಸ್ಟರ್ ಸಿಟಿ ಸೇರಿದ ಬ್ರೆಜಿಲಿಯನ್ ಗೋಲ್‌ಕೀಪರ್ ಎಡರ್ಸನ್, ತಾವು ಕಳೆದ ಎಂಟು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಒಂದೇ ಒಳ ಉಡುಪನ್ನು ಧರಿಸುತ್ತಿರುವುದಾಗಿ ಬಿಬಿಸಿಯ 'ಮ್ಯಾಚ್ ಆಫ್ ದಿ ಡೇ' ಸಂದರ್ಶನದಲ್ಲಿ ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ.
ಈ ವಿಚಿತ್ರ ಹವ್ಯಾಸದ ನಡುವೆಯೇ ಎಡರ್ಸನ್​ ಅವರು ಮ್ಯಾಂಚೆಸ್ಟರ್ ಸಿಟಿ ಪರ ಹಲವು ಟ್ರೋಫಿಗಳನ್ನು ಗೆದ್ದಿರುವುದು ವಿಶೇಷವಾಗಿದೆ. ಸಂದರ್ಶಕರು ಕುತೂಹಲದಿಂದ "ಆ ಒಳ ಉಡುಪು ಈಗ ಖಂಡಿತವಾಗಿಯೂ ಸುಸ್ಥಿತಿಯಲ್ಲಿರಲು ಸಾಧ್ಯವಿಲ್ಲ ಅಲ್ಲವೇ?" ಎಂದು ಪ್ರಶ್ನಿಸಿದಾಗ, ಎಡರ್ಸನ್ ನಗುತ್ತಲೇ "ಇಲ್ಲ" ಎಂದು ಉತ್ತರಿಸಿದ್ದು, ಇಬ್ಬರ ನಡುವೆ ಹಾಸ್ಯದ ವಾತಾವರಣ ನಿರ್ಮಿಸಿತು. ಎಂಟು ವರ್ಷಗಳಿಂದ ಈ ನಂಬಿಕೆಯನ್ನು ಅವರು ಚಾಚೂತಪ್ಪದೆ ಪಾಲಿಸುತ್ತಾ ಬಂದಿದ್ದಾರೆ.
ಎಡರ್ಸನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ನೋಡುವುದಾದರೆ, ಅವರು 2018ರಲ್ಲಿ ಚಿಲಿ ವಿರುದ್ಧದ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು ಮತ್ತು ಆ ಪಂದ್ಯದಲ್ಲಿ ಬ್ರೆಜಿಲ್ 3-0 ಅಂತರದ ಜಯ ಸಾಧಿಸಿತ್ತು. 2022ರ ಕತಾರ್ ಫಿಫಾ ವಿಶ್ವಕಪ್‌ಗೂ ಆಯ್ಕೆಯಾಗಿದ್ದ ಅವರು ಬ್ರೆಜಿಲ್ ಪರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈವರೆಗೆ ಬ್ರೆಜಿಲ್ ರಾಷ್ಟ್ರೀಯ ತಂಡದ ಪರ 31 ಪಂದ್ಯಗಳನ್ನು ಆಡಿರುವ ಎಡರ್ಸನ್, ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಪರ 276 ಪಂದ್ಯಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net