ಗಿಲ್​ಗೆ ಸಂಜು ಮೇಲೆ ಯಾಕಿಷ್ಟು ಕೋಪ? ಕ್ಯಾಪ್ಟನ್​ ಆಗಿ ಯಾರಾದ್ರೂ ಈ ರೀತಿ ಮಾಡ್ತಾರಾ? | Sanju Samson

ಶುಭಮನ್ ಗಿಲ್​, ಟೀಮ್ ಇಂಡಿಯಾ
ಶುಭಮನ್ ಗಿಲ್​, ಟೀಮ್ ಇಂಡಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್​ ಅದ್ಭುತ ಬ್ಯಾಟಿಂಗ್ ಪ್ರದರ್ಶನ
  • ಪ್ಲೇಯರ್ ಆಫ್​ ದಿ ಟೂರ್ನಮೆಂಟ್ ಪ್ರಶಸ್ತಿ ಸ್ಯಾಮ್ಸನ್​ ಪಾಲು
  • ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದ ಫೋಟೋ ಹಂಚಿಕೊಂಡ ಶುಭಮನ್ ಗಿಲ್​
  • ಎಲ್ಲರಿಗೂ ಕಂಡಿದ್ದು ಗಿಲ್​ಗೆ ಮಾತ್ರ ಕಾಣಲಿಲ್ವಾ ಎಂದು ಫ್ಯಾನ್ಸ್ ಬೇಸರ
ಬೆಂಗಳೂರು: ಮಾ.08ರ ರಾತ್ರಿ ಅಹಮದಾಬಾದ್​ ಕ್ರೀಡಾಂಗಣದಲ್ಲಿ ನಡೆದಿದ್ದು ಹಿಸ್ಟರಿ ರಿಪೀಟ್​. ನ್ಯೂಜಿಲೆಂಡ್​ ಎದುರು 96 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಮೂರನೇ ಬಾರಿಗೆ ಟಿ20 ವಿಶ್ವಕಪ್​ ಟ್ರೋಫಿ ಎತ್ತಿಹಿಡಿದಿದ್ದು ಇತಿಹಾಸ. ಈ ಟೂರ್ನಿಯಲ್ಲಿ ಎಲ್ಲರ ಹೃದಯ ಗೆದ್ದ ದಕ್ಷಿಣ ಭಾರತದ ಸ್ಟಾರ್ ಬ್ಯಾಟರ್​ ಸಂಜು ಸ್ಯಾಮ್ಸನ್ (Sanju Samson)​, ಫೈನಲ್ ಪಂದ್ಯದಲ್ಲಿಯೂ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ್ದು ರೋಚಕ.

89, 97, 89 ರನ್​

46 ಎಸೆತಗಳಲ್ಲಿ 89 ರನ್​ಗಳ ಉತ್ತಮ ಕೊಡುಗೆ ನೀಡಿ ಸ್ಯಾಮ್ಸನ್​, ಸೂಪರ್​-8, ಸೆಮಿಫೈನಲ್​ ಮತ್ತು ಫೈನಲ್​ನಂತಹ ಬಹುಮುಖ್ಯ​ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕೊಟ್ಟರು. ಇದೇ ಕಾರಣಕ್ಕೆ, ಅವರಿಗೆ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್​ ಪ್ರಶಸ್ತಿ ಕೂಡ ಲಭಿಸಿತು. ಹೀಗಿರುವಾಗ, ಪ್ರಶಸ್ತಿ ಗೆದ್ದ ಭಾರತ ತಂಡದ ಫೋಟೋ ಹಂಚಿಕೊಂಡು ಶುಭಕೋರಿದ ಭಾರತದ ಸ್ಟಾರ್​ ಬ್ಯಾಟರ್, ಏಕದಿನ ತಂಡದ ನಾಯಕ ಶುಭಮನ್ ಗಿಲ್​ ಅವರಿಗೆ ಇದೊಂದು ಸಣ್ಣ ತಪ್ಪು ಗೊತ್ತಾಗಲಿಲ್ಲವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಬೇಸರ ಹೊರಹಾಕಿದ್ದಾರೆ.

ಗಿಲ್​ಗೆ ಸಂಜು ಕಂಡ್ರೆ ಕೋಪವೇಕೆ?

ಟೀಮ್ ಇಂಡಿಯಾಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶುಭಕೋರಿದ ಶುಭಮನ್ ಗಿಲ್​, ಅಭಿನಂದನೆಗಳು ಎಂಬ ಶೀರ್ಷಿಕೆ ನೀಡಿ ಪೋಸ್ಟ್​ ಮಾಡಿದ್ದಾರೆ. ಆದರೆ, ನೆಟ್ಟಿಗರ ಕಣ್ಣು ಎಷ್ಟು ಚುರುಕಾಗಿದೆ ಎಂದರೆ, ಆ ಫೋಟೋದಲ್ಲಿ ತಂಡದ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದ ಸ್ಟಾರ್​ ಆಟಗಾರ ಸಂಜು ಸ್ಯಾಮ್ಸನ್ ಇಲ್ಲದಿರುವುದನ್ನು ಪತ್ತೆಹಚ್ಚಿದ್ದಾರೆ. ಇದು ಖಚಿತವಾದ ಬಳಿಕ ಗಿಲ್​ ನಡೆಗೆ ಕಿಡಿಕಾರಿರುವ ಫ್ಯಾನ್ಸ್​, ಸಂಜುರನ್ನು ಎಡಿಟ್​ ಮಾಡಿ ಹಾಕುವಂತ ಉದ್ದೇಶ ಏನಿತ್ತು ನಿಮಗೆ? ಅಂತಹ ಮುನಿಸು ಏನು? ಎಂದೆಲ್ಲ ಕಮೆಂಟ್​ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅಸಲಿಯತ್ತೇ ಬೇರೆ!

ಅಷ್ಟಕ್ಕೂ, ಶುಭಮನ್ ಗಿಲ್​ ಹಾಕಿರುವ ಫೋಟೋದಲ್ಲಿ ಸಂಜು ಸ್ಯಾಮ್ಸನ್​ ಇಲ್ಲದಿರುವುದು ಹೌದು. ಆದರೆ, ಅದು ಎಡಿಟ್​ ಅಥವಾ ರಿಮೂವಲ್​ ಮಾಡಿರುವ ಫೋಟೋ ಏನೆಲ್ಲ. ಬದಲಿಗೆ, ಫೋಟೋಗ್ರಾಫರ್​ ತೆಗೆದ ಹಲವಾರು ಟೀಮ್ ಇಂಡಿಯಾ ಫೋಟೋಗಳಲ್ಲಿ ಒಂದಾಗಿದೆ. ಗಿಲ್​ ಪೋಸ್ಟ್​ ಮಾಡಿರುವ ಛಾಯಾಚಿತ್ರದಲ್ಲಿ ಸಂಜು ನಿಂತಿಲ್ಲ. ದುರಾದೃಷ್ಟಕ್ಕೆ ಶುಭಮನ್​, ಅದನ್ನೇ ಹಂಚಿಕೊಂಡಿರುವುದು ಸದ್ಯ ತಪ್ಪು ಕಲ್ಪನೆ ಮತ್ತು ಮಾಹಿತಿಗೆ ಕಾರಣವಾಗಿದೆ,(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net