ಹರ್ಮನ್​, ಶಫಾಲಿ ಸ್ಫೋಟಕ ಅರ್ಧಶತಕ! ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಕ್ಲೀನ್​ ಸ್ವೀಪ್​ ಮಾಡಿದ ಸ್ಮೃತಿ ಪಡೆ | IND W vs ZIM W

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ, ಹರ್ಮನ್‌ಪ್ರೀತ್ ಕೌರ್ ಮತ್ತು ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್​​ ನೆರವಿನಿಂದ ಭಾರತ ತಂಡ 7 ವಿಕೆಟ್​ ನಷ್ಟಕ್ಕೆ 216 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
 IND W vs ZIM W
ಹರ್ಮನ್​, ಶಫಾಲಿ ಸ್ಫೋಟಕ ಅರ್ಧಶತಕ! ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಕ್ಲೀನ್​ ಸ್ವೀಪ್​ ಮಾಡಿದ ಸ್ಮೃತಿ ಪಡೆ | IND W vs ZIM W
Published on: 
  • ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ

  • 3-0 ಅಂತರದಲ್ಲಿ ಜಿಂಬಾಬ್ವೆಯನ್ನು ಕ್ಲೀನ್ ಸ್ವೀಪ್​ ಮಾಡಿದ ಭಾರತ

  • ಹರ್ಮನ್‌ಪ್ರೀತ್, ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್

  • ಬೌಲಿಂಗ್‌ನಲ್ಲಿ ಮಿಂಚಿದ ನಂದಿನಿ ಶರ್ಮಾ

IND W vs ZIM W: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತೀಯ ಮಹಿಳಾ ತಂಡವು ಭರ್ಜರಿ ಆಲ್​ರೌಂಡ್​ ಪ್ರದರ್ಶನದ ಮೂಲಕ 3-0 ಅಂತರದಲ್ಲಿ ಕ್ಲೀನ್ ಸ್ವೀಪ್​ ಮಾಡಿದೆ. ಮೊದಲೆರೆಡು ಪಂದ್ಯಗಳಂತೆಯೇ ಮೂರನೇ ಟಿ20 ಪಂದ್ಯದಲ್ಲೂ ಜಿಂಬಾಬ್ವೆ ತಂಡವನ್ನು ಮಣಿಸಿದ ಸ್ಮೃತಿ ಮಂಧಾನ ಪಡೆ, 92 ರನ್‌ಗಳ ಬೃಹತ್ ಅಂತರದ ಜಯ ದಾಖಲಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ, ಹರ್ಮನ್‌ಪ್ರೀತ್ ಕೌರ್ ಮತ್ತು ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್​​ ನೆರವಿನಿಂದ ಭಾರತ ತಂಡ 7 ವಿಕೆಟ್​ ನಷ್ಟಕ್ಕೆ 216 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ಮಹಿಳಾ ತಂಡವು, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ, ಸರಣಿಯ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತವು ಕ್ಲೀನ್ ಸ್ವೀಪ್ ಸಾಧಿಸಿತು.

ಹರ್ಮನ್‌ಪ್ರೀತ್ ಕೌರ್ ಅಬ್ಬರದ ಆಟ

ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದು ವಿಶೇಷ. ಹರ್ಮನ್​, ಕೇವಲ 41 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಮತ್ತೊಂದೆಡೆ, ಶಫಾಲಿ ವರ್ಮಾ 37 ಎಸೆತಗಳಲ್ಲಿ 69 ರನ್ ಗಳಿಸಿ ಅದ್ಭುತ ಆಟ ಪ್ರದರ್ಶಿಸಿದರು. ಇವರಿಬ್ಬರ ಆಕ್ರಮಣಕಾರಿ ಆಟದಿಂದ ಭಾರತದ ಮೊತ್ತ ಸುಲಭವಾಗಿ 200ರ ಗಡಿದಾಟಲು ಸಾಧ್ಯವಾಯಿತು.

Also Read
1954ರಲ್ಲಿ ಟೋಕಿಯೋ ಏರ್​ಪೋರ್ಟ್​ಗೆ ಬಂದಿಳಿದ ಈತ ಹೇಳಿದ್ದು ಮಾತ್ರ ವಿಶ್ವ ಭೂಪಟದಲ್ಲೇ ಇಲ್ಲದ ದೇಶದ ಹೆಸರು | The Taured Man
 IND W vs ZIM W

ನಂದನಿ ಶರ್ಮಾ ಫಿನಿಶಿಂಗ್​

ಉಳಿದಂತೆ ಅನುಷ್ಕಾ ಬ್ರಿಜ್​ಮೋಹನ್​ ಶರ್ಮಾ 28 ರನ್ ಗಳಿಸಿದರೆ, ಉಳಿದ ಬ್ಯಾಟರ್‌ಗಳಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ರಿಚಾ ಘೋಷ್ (1), ನಿಕ್ಕಿ ಪ್ರಸಾದ್ (9), ಅರುಂಧತಿ ರೆಡ್ಡಿ (4) ಮತ್ತು ಪ್ರೇಮಾ ರಾವತ್ (4) ರನ್​ಗೆ ಔಟಾದರು. ಇನ್ನು ಬೌಲಿಂಗ್​ನಲ್ಲಿ ತಂಡದ ಪರ ಮಿಂಚಿದ ಭಾರತೀಯ ಬೌಲರ್‌ಗಳ ಪೈಕಿ ನಂದನಿ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆದು, ಎದುರಾಳಿ ತಂಡದಿಂದ ಗೆಲುವನ್ನು ಸಂಪೂರ್ಣವಾಗಿ ಕಸಿದರು. ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ನಿಕ್ಕಿ ಪ್ರಸಾದ್ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಪಂದ್ಯದ ಕೊನೆಯ ಓವರ್‌ನಲ್ಲಿ ನಂದನಿ ಶರ್ಮಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಿಂಬಾಬ್ವೆ ಇನ್ನಿಂಗ್ಸ್‌ಗೆ ತೆರೆ ಎಳೆದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net